ಬೆಂಗಳೂರು, ಜು. 01(DaijiworldNews/HR): ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಈಗಾಗಲೇ ಕೊರೊನಾ ಲಸಿಕೆ ನೀಡೋದಕ್ಕೆ ಆರಂಭವಾಗಿದ್ದು, 94 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ಕೂಡ ನೀಡಲಾಗಿದೆ. ಇದರ ಮಧ್ಯೆ ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಗೆ ತೆರಳೋದಕ್ಕೆ ಕೊರೊನಾ ಲಸಿಕೆ ಕಡ್ಡಾಯ ಎಂಬ ಸುದ್ದಿ ಹರಿದಾಡುತ್ತಿದ್ದು, ಕಾಲೇಜುಗಳಿಗೆ ತೆರಳೋದಕ್ಕೆ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಕಡ್ಡಾಯವಲ್ಲ ಎಂಬುದಾಗಿ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್.ಅಶ್ವತ್ಥನಾರಾಯಣ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕರ್ನಾಟಕದಲ್ಲಿ ಈಗಾಗಲೇ ಜೂನ್.28ರವರೆಗೆ 94 ಸಾವಿರ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಇನ್ನು 10 ದಿನಗಳಲ್ಲಿ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವಂತ ಉದ್ದೇಶ ಹೊಂದಲಾಗಿದೆ" ಎಂದರು.
ಇನ್ನು ಕಾಲೇಜು ಆರಂಭಗೊಳ್ಳದೇ ಇದ್ದರೂ, ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗೆ ತೊಂದರೆ ಆಗದಂತೆ ನಡೆಯೋದಕ್ಕಾಗಿ ಆನ್ ಲೈನ್ ಮತ್ತು ಆಪ್ ಲೈನ್ ತರಗತಿ ಆರಂಭಿಸಲಾಗಿದೆ. ಲಸಿಕೆ ಪಡೆದ ನಂತರವೂ ಆಫ್ ಲೈನ್ ತರಗತಿಗೆ ವಿದ್ಯಾರ್ಥಿಗಳಿಗೆ ಹಾಜರಾಗುವುದು ಕಡ್ಡಾಯವಲ್ಲ" ಎಂದಿದ್ದಾರೆ.
ಆರೋಗ್ಯ ಇಲಾಖೆಗೆ ವಿದ್ಯಾರ್ಥಿಗಳು ಲಸಿಕೆ ಪಡೆದು, ತರಗತಿಗೆ ಹಾಜರಾಗೋದು ಕಡ್ಡಾಯವೇ ಎಂಬುದಾಗಿ ನೋಟಿಸ್ ಕುರಿತಂತೆ ಮಾತನಾಡಿದ ಅವರು, ಈಗ ತರಗತಿಗೆ ಹಾಜರಾಗಲು ಕೊರೊನಾ ಲಸಿಕೆ ಕಡ್ಡಾಯವಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.