ನವದೆಹಲಿ, ಜು 01 (DaijiworldNews/PY): ದೇಶಾದಾದ್ಯಂತ ಟ್ವಿಟ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಟ್ವಿಟ್ಟರ್ ಬಳಕೆದಾರರಿಗೆ ತಮ್ಮ ಖಾತೆಗಳಿಗೆ ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ.
ಹಲವಾರು ಬಳಕೆದಾರರು ಗುರುವಾರ ಬೆಳಗ್ಗೆ ಟ್ವಿಟ್ಟರ್ ವೆಬ್ಸೈಟ್ಗೆ ಪ್ರವೇಶಿಸುವ ಸಮಸ್ಯೆ ಬಗ್ಗೆ ವರದಿ ಮಾಡಿದ್ದಾರೆ. ಮೊಬೈಲ್ ಅಪ್ಲಿಕೇಶನ್ ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ ಕೂಡಾ, ವೆಬ್ ಸೈಟ್ ಪ್ರವೇಶಿಸುವ ವೇಳೆ ಬಳಕೆದಾರರು ಸಮಸ್ಯೆ ಎದುರಿಸಿದರು.
ಬಳಕೆದಾರರು ಟ್ವಿಟ್ಟರ್ ವೆಬ್ಸೈಟ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಪರದೆಯ ಮೇಲೆ ಸಮ್ಥಿಂಗ್ ಎರರ್ ಎಂದು ಬರುತ್ತಿತ್ತು ಎಂದು ವರದಿ ಮಾಡಿದ್ದಾರೆ.
ಟ್ವಿಟ್ಟರ್, ತಾಂತ್ರಿಕ ದೋಷ ಸಮಸ್ಯೆಯನ್ನು ಒಪ್ಪಿಕೊಂಡಿದ್ದು, "ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಲಾಗುತ್ತದೆ" ಎಂದು ಟ್ವೀಟ್ ಮೂಲಕ ತಿಳಿಸಿದೆ.
"ವೆಬ್ನಲ್ಲಿ ಪ್ರೊಫೈಲ್ಗಳ ಟ್ವೀಟ್ಗಳಲ್ಲಿ ಕೆಲವು ಮಂದಿಗೆ ಲೋಡ್ ಆಗಿರಲಿಕ್ಕಿಲ್ಲ. ಪ್ರಸ್ತುತ ನಾವು ಇದನ್ನು ಫಿಕ್ಸ್ ಮಾಡುತ್ತಿದ್ದೇವೆ" ಎಂದು ಹೇಳಿದೆ.
ಬೆಳಗ್ಗೆ 8 ಗಂಟೆಯ ವೇಳೆ ವೆಬ್ ಸೈಟ್ನ ಸಮಸ್ಯೆಯನ್ನು ವರದಿ ಮಾಡಿದೆ. ಅಪ್ಲಿಕೇಶನ್ ಅನ್ನು16 ಪ್ರತಿಶತ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಕೆದಾರರಿಗೆ ಲೋಡ್ ಮಾಡಲು ಸಾಧ್ಯವಾಗಿಲ್ಲ.