ನವದೆಹಲಿ, ಜೂ 30 (DaijiworldNews/PY): "ಭವಿಷ್ಯದಲ್ಲಿ ಎದುರಾಗಬಹುದಾದ ಡ್ರೋನ್ ದಾಳಿಗಳನ್ನು ಎದುರಿಸಲು ಭಾರತದ ಕೂಡಾ ವಿಶೇಷ ಡ್ರೋನ್ಗಳನ್ನು ನಿರ್ಮಿಸಬೇಕು" ಎಂದು ಖ್ಯಾತ ಉದ್ಯಮಿ ಹಾಗೂ ಮಹೀಂದ್ರಾ ಗುಂಪಿನ ಅಧ್ಯಕ್ಷ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಯುದ್ಧದ ಕಾರ್ಯವಿಧಾನಗಳು ಬದಲಾಗುತ್ತಿವೆ. ವಿಶೆಷ ಡ್ರೋನ್ಗಳನ್ನು ಖರೀದಿಸಲು ಭಾರತ ಸರ್ಕಾರ ರಕ್ಷಣಾ ಬಜೆಟ್ನಲ್ಲಿ ಹಂಚಿಕೆಯನ್ನು ಹೆಚ್ಚಿಸಬೇಕು" ಎಂದಿದ್ದಾರೆ.
"ಡ್ರೋನ್ ದಾಳಿಗಳನ್ನು ತಡೆಗಟ್ಟಲು ಇಸ್ರೇಲ್ ಮಾದರಿಯಲ್ಲಿ ಐರನ್ ಡೋಮ್ನಂತಹ ತಂತ್ರಜ್ಞಾನಗಳ ಬಗ್ಗೆ ಸರ್ಕಾರ ಕೆಲಸ ಮಾಡಬೇಕು" ಎಂದು ತಿಳಿಸಿದ್ದಾರೆ.
"ಜೂನ್ 27ರ ಬೆಳಗ್ಗೆ ಜಮ್ಮುವಿನ ವಾಯುಪಡೆ ನಿಲ್ದಾಣದ ತಾಂತ್ರಿ ಪ್ರದೇಶದಲ್ಲಿ ಡ್ರೋನ್ಗಳಿಂದ ಎರಡು ಸ್ಫೋಟ ಸಂಭವಿಸಿವೆ. ಸ್ಪೋಟದ ಪರಿಣಾಮ ಒಂದು ಕಟ್ಟಡದ ಮೇಲ್ಛಾವಣಿಗೆ ಹಾನಿಯಾಗಿದ್ದು, ಇನ್ನೊಂದು ತೆರೆದ ಪ್ರದೇಶದಲ್ಲಿ ಸ್ಫೋಟಗೊಂಡಿದೆ" ಎಂದು ಭಾರತೀಯ ವಾಯುಪಡೆ ತಿಳಿಸಿದೆ.
"ಸಲಕರಣೆಗಳಿಗೆ ಯಾವುದೇ ಹಾನಿಯಾಗಿಲ್ಲ" ಎಂದು ಹೇಳಿದೆ.