ಲಕ್ನೋ, ಜೂ 30 (DaijiworldNews/PY): "ಸಮಾಜವನ್ನು ಇಗ್ಭಾಗ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಓರ್ವ ರಾಜಕೀಯ ಉಗ್ರ" ಎಂದು ಉತ್ತರಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಪಶ್ಚಿಮಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು, "ಓವೈಸಿ ಜನರಿಗೆ ಪ್ರಚೋದನೆ ನೀಡಿ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಓರ್ವ ರಾಜಕೀಯ ಉಗ್ರ. ಸಮಾಜವನ್ನು ಪ್ರಚೋದಿಸುವುದು, ರಾಜಕೀಯ ಭಯೋತ್ಪಾದಕ, ಶಾಂತಿ ಕದಡುವುದು ಓವೈಸಿ ಅವರ ಉದ್ದೇಶ" ಎಂದಿದ್ದಾರೆ.
"ಜಮ್ಮು-ಕಾಶ್ಮೀರದ ಹಾದಿಯಲ್ಲಿ ಪಶ್ಚಿಮಬಂಗಾಳ ಸಾಗುತ್ತಿದೆ. ಕೇಂದ್ರ ಸರ್ಕಾರ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ" ಎಂದಿದ್ದಾರೆ.
"ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವ ತನಕ ಭಾರತದ ಜಾತ್ಯತೀತತೆಯ ವಿಚಾರವಾಗಿ ಎಐಎಂಐಎಂ ನಾಯಕ ಓವೈಸಿ ಅವರು ನಂಬಿಕೆ ಇಡಬೇಕು" ಎಂದು ಹೇಳಿದ್ದಾರೆ.
"ಪಶ್ಚಿಮಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಸಾಧ್ಯತೆ ಇದೆ" ಎಂದಿದ್ದಾರೆ.