ನವದೆಹಲಿ, ಜೂ 30 (DaijiworldNews/PY): ಕೊರೊನಾ ಸಾಂಕ್ರಾಮಿಕದ ವೇಳೆ ಅಲೋಪತಿ ಔಷಧಿಯ ಬಳಕೆಯ ವಿಚಾರವಾಗಿ ನೀಡಿರುವ ಹೇಳಿಕೆಯ ಮೂಲ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋಟ್ ಯೋಗಗುರು ಬಾಬಾ ರಾಮ್ದೇವ್ ಅವರಿಗೆ ತಿಳಿಸಿದೆ.
ಮುಖ್ಯ ನಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ಪೀಠ ಬುಧವಾರ ಅರ್ಜಿ ವಿಚಾರಣೆ ನಡೆಸಿದ್ದು, "ಅವರು ಅಲೋಪತಿ ಔಷಧದ ಬಗ್ಗೆ ನೀಡುರುವ ಮೂಲ ಹೇಳಿಕೆ ಯಾವುದು?. ನೀವು ನ್ಯಾಯಾಲಯಕ್ಕೆ ಪೂರ್ಣ ಹೇಳಿಕೆ ಹಾಗೂ ಮಾಹಿತಿಯನ್ನು ಒದಗಿಸಿಲ್ಲ" ಎಂದು ರಾಮ್ದೇವ್ ಪರ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರಿಗೆ ತಿಳಿಸಿದ್ದಾರೆ.
ನ್ಯಾಯಾಧೀಶ ಎ. ಸ್.ಬೋಪಣ್ಣ ಹಾಗೂ ಹೃಷಿಕೇಶ ರಾಯ್ ಅವರನ್ನೊಳಗೊಂಡ ಪೀಠದ ಎದುರು ರೋಹತ್ಗಿ ಅವರು, ಮೂಲ ವಿಡಿಯೋದ ದೃಶ್ಯಗಳು ಹಾಗೂ ಅದರಲ್ಲಿನ ಮಾಹಿತಿಗಳನ್ನು ಸಲ್ಲಿಸುವುದಾಗಿ ಹೇಳಿದ್ದಾರೆ. ಇದಕ್ಕೆ ನ್ಯಾಯಪೀಠ ಸಮ್ಮಿತಿಸಿದ್ದು, ಜುಲೈ 5ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕೊರೊನಾ ಸಾಂಕ್ರಾಮಿಕದ ಸಂದರ್ಭ ಅಲೋಪತಿ ಔಷಧಿ ಬಳಸುವವರ ವಿರುದ್ದ ಮಾಡಿದ ಟೀಕೆಗಳ ವಿಚಾರವಾಗಿ ಛತ್ತೀಸ್ಘಡ್ ಭಾರತೀಯ ವೈದ್ಯಕೀಯ ಸಂಘ ದೂರು ಸಲ್ಲಿಸಿತ್ತು. ಈ ಬಗ್ಗೆ ರಾಮ್ದೇವ್ ಅವರ ವಿರುದ್ದ ಅನೇಕ ಎಫ್ಐಆರ್ಗಳು ದಾಖಲಾಗಿವೆ. ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ತಡೆಹಿಡಿಯಬೇಕು ಎಂದು ರಾಮ್ದೇವ್ ಅವರು ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ನ್ಯಾಯಾಲಯ ಈ ಅರ್ಜಿಯ ವಿಚಾರಣೆ ನಡೆಸಿತು. ನ್ಯಾಯಾಲಯ ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿತು.