ಹಾವೇರಿ, ಜೂ 30 (DaijiworldNews/MS): ತೆಂಗಿನಕಾಯಿ ತಲೆ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ 11 ತಿಂಗಳ ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಹಾವೇರಿಯ ಹಿರೆಕೇರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಹಂಸಭಾವಿಯ ಮಲ್ಲಿಕಾರ್ಜುನ ವಾಲ್ಮೀಕಿ ಹಾಗೂ ಮಾಲಾ ದಂಪತಿಯ 11 ತಿಂಗಳ ಮಗು ತನ್ವೀತ್ ಮೃತಪಟ್ಟ ಕಂದಮ್ಮ.
ಮಂಗಳವಾರ ಬೆಳಗ್ಗೆ ಮನೆ ಎದುರು ತಾಯಿ ತನ್ನ ಮಗ ತನ್ವೀತ್ನಿಗೆ ಊಟ ಮಾಡಿಸುತ್ತಿದ್ದ ಸಂದರ್ಭ ಮರದ ಮೇಲಿಂದ ತೆಂಗಿನಕಾಯಿ ತಲೆಯ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ ಮಗುವನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ ಹಂಸಭಾವಿ ಠಾಣಾ ಪೊಲೀಸರು ತಿಳಿಸಿದ್ದಾರೆ.
ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.