ಮುಂಬೈ, ಜೂ 30 (DaijiworldNews/MS): ಖ್ಯಾತ ಬಾಲಿವುಡ್ ನಟಿ ,ಫ್ಯಾಶನ್ ಡಿಸೈನರ್ ಹಾಗೂ ಕ್ರಿಕೆಟ್ ವಿಶ್ಲೇಷಕಿ ಮಂದಿರಾ ಬೇಡಿ ಅವರ ಪತಿ ಚಿತ್ರ ನಿರ್ಮಾಪಕ ರಾಜ್ ಕೌಶಲ್್ ಹೃದಯಾಘಾತ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
49 ವರ್ಷದ ರಾಜ್ ಕೌಶಲ್ ಅವರು ತಮ್ಮ ಮನೆಯಲ್ಲಿ ಇಂದು ಮುಂಜಾನೆ 4.30 ರಿಂದಲೇ ಎದೆ ನೋವಿನಿಂದ ಬಳಲುತ್ತಿದ್ದು, ಯಾವುದೇ ವೈದ್ಯಕೀಯ ಸಹಾಯ ಪಡೆಯುವ ಮೊದಲೇ 10:09ಕ್ಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
2005 ರಲ್ಲಿ ಬಿಡುಗಡೆಯಾದ 'ಮೈ ಬ್ರದರ್ ನಿಖಿಲ್' ಚಿತ್ರದಲ್ಲಿ ರಾಜ್ ಕೌಶಲ್ ಅವರೊಂದಿಗೆ ಕೆಲಸ ಮಾಡಿದ ಚಲನಚಿತ್ರ ನಿರ್ಮಾಪಕ ಓನಿರ್ ಈ ಸುದ್ದಿಯನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ
ರಾಜ್ ಕೌಶಲ್ ಸಾವನ್ನಪ್ಪಿರುವ ವಿಚಾರವನ್ನು ಅವರ ಕುಟುಂಬ ಸದಸ್ಯರು ಇನ್ನಷ್ಟೇ ದೃಢಪಡಿಸಬೇಕಾಗಿದೆ . ಮಂದಿರ ಬೇಡಿ ರಾಜ್ ಕೌಶಲ್ ಅವರನ್ನು 1999ರ ಫೆಬ್ರುವರಿ 4ರಂದು ವಿವಾಹವಾಗಿದ್ದರು. ದಂಪತಿಗೆ 2011ರಲ್ಲಿ ಪುತ್ರ ಜನಿಸಿದ್ದು, 2020ರ ಅಕ್ಟೋಬರ್ ನಲ್ಲಿ 4ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು.