ಜಮ್ಮು, ಜೂ 30 (DaijiworldNews/PY): ಜಮ್ಮುವಿನ ಕಲುಚಕ್ ಹಾಗೂ ಕುಂಜ್ವಾನಿ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ ಭದ್ರತಾ ಪಡೆಗಳು ಎರಡು ಡ್ರೋನ್ಗಳನ್ನು ಗುರುತಿಸಿದ್ದಾರೆ.
"ಇಂದು ಬೆಳಗ್ಗೆ ಕಲುಚಕ್ ಹಾಗೂ ಕುಂಜ್ವಾನಿ ಪ್ರದೇಶಗಳಲ್ಲಿ ಎರಡು ಡ್ರೋನ್ಗಳನ್ನು ಗುರುತಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
"ಜೂನ್ 27ರಂದು ಜಮ್ಮುವಿನ ಏರ್ಪೋರ್ಟ್ನ ಏರ್ಪೋರ್ಸ್ ಸ್ಟೇಶನ್ನಲ್ಲಿ ಅವಳಿ ಸ್ಪೋಟ ಸಂಭವಿಸಿತ್ತು. ಈ ಬಾಂಬ್ ದಾಳಿ ಹಿಂದೆ ನಿಷೇಧಿತ ಲಷ್ಕರ್ -ಇ-ತೈಬಾ ಉಗ್ರಗಾಮಿ ಸಂಘಟನೆ ಇರಬಹುದು" ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಕ್ ಸಿಂಗ್ ಹೇಳಿದ್ದಾರೆ.
ಜಮ್ಮುವಿನಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆಯಿಂದ ಅಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಸೆಕ್ಯೂರಿಟಿ ಫೋರ್ಸ್ಗಳು ಹೈ ಅಲರ್ಟ್ನಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಉನ್ನತಮಟ್ಟದ ಸಭೆ ನಡೆಸಿದ್ದರು.