ನವದೆಹಲಿ, ಜೂ 30 (DaijiworldNews/MS): ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಗು ಮತ್ತು ತಾಯಿ ಆರೋಗ್ಯ ದೃಷ್ಟಿಯಿಂದ ಲಸಿಕೆ ಕಡ್ಡಾಯ ಎಂದು ಹೇಳಿದ್ದು, ಗರ್ಭ ಧರಿಸುವಿಕೆಯು ಕೊರೊನಾ ರಿಸ್ಕ್ ಅನ್ನು ಹೆಚ್ಚಿಸುವುದಿಲ್ಲ’ ಎಂಬುದನ್ನು ಸ್ಪಷ್ಟಪಡಿಸಿದೆ.
ಗರ್ಭಿಣಿಯರು ಕೋವಿನ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಬಹುದು ಅಥವಾ ನೇರ ಕೊರೊನಾ ಲಸಿಕೆ ಕೇಂದ್ರಗಳಿಗೆ ಹೋಗಿ ಅಲ್ಲಿ ಹೆಸರು ನೋಂದಾಯಿಸಿ ಲಸಿಕೆ ಪಡೆಯಬಹುದು ಎಂದು ಹೇಳಿದೆ. ಹೆಚ್ಚಿನ ಗರ್ಭಿಣಿಯರಿಗೆ ಸೋಂಕಿಗೊಳಗಾದರೂ ರೋಗಲಕ್ಷಣಗಳು ಕೊರೊನಾ ಇರುವುದಿಲ್ಲ. ಆದರೆ ಅವರ ಆರೋಗ್ಯ ಬೇಗನೆ ಹದಗೆಡಬಹುದು. ಹೀಗಾಗಿ ತಮ್ಮ ಹಾಗೂ ತಮ್ಮ ಹೊಟ್ಟೆಯಲ್ಲಿರುವ ಮಗುವನ್ನು ರಕ್ಷಿಸಿಕೊಳ್ಳಬೇಕೆಂದರೆ ಅವರು ಲಸಿಕೆ ಪಡೆಯುವುದು ಮುಖ್ಯ ಎಂದು ಸಚಿವಾಲಯ ತಿಳಿಸಿದೆ.
ಗರ್ಭಿಣಿಯರಿಗೆ ಸೋಂಕು ತಗಲಿದರೂ ಶೇ.90ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದೇ ಗುಣಮುಖರಾಗಿದ್ದಾರೆ. ಆದರೆ ಕೆಲವೇ ಕೆಲವು ಪ್ರಕರಣಗಳಲ್ಲಿ ಮಾತ್ರ ಅವಧಿ ಪೂರ್ವ ಹೆರಿಗೆ, ಮಗುವಿನ ತೂಕ ಇಳಿಕೆಯಂಥ ಘಟನೆಗಳು ನಡೆದಿವೆ ಎಂದೂ ತಿಳಿಸಲಾಗಿದೆ.