ನವದೆಹಲಿ, ಜೂ. 29(DaijiworldNews/SM): ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಲಸಿಕಾ ಅಭಿಯಾನ ತೀವ್ರಗೊಂಡಿದ್ದು, ಆರಂಭದಲ್ಲಿ ಅರವತ್ತು ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಿಸಲಾತ್ತು. ದೇಶದಲ್ಲಿ ಇಲ್ಲಿಯ ತನಕ 60 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸಿನ ಜನಸಂಖ್ಯೆಯ ಶೇಕಡಾ 49 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ, 18ರಿಂದ 44 ವರ್ಷದೊಳಗಿನವರು 59.7 ಕೋಟಿ ಜನರು ಅಂದರೆ ಶೇಕಡಾ 15 ರಷ್ಟು ಜನರು ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟು ದೇಶದಲ್ಲಿ ಲಸಿಕೆ ಪಡೆದುಕೊಂಡವರ ಸಂಖ್ಯೆ ವಿರಳವಾಗಿದೆ. ಇಲ್ಲಿಯ ತನಕ ಕೇವಲ ಲಸಿಕೆ ಪಡೆದವರ ಪ್ರಮಾಣ 33.1 ಕೋಟಿ ದಾಟಿದೆ ಎಂದು ವರದಿಯಾಗಿದೆ.
ಜೂನ್ 21-28 ರಿಂದ 57.68 ಲಕ್ಷ ಸರಾಸರಿ ದೈನಂದಿನ ಲಸಿಕೆ ಪೂರೈಸಲಾಗಿದೆ. ಮೇ 1ರಿಂದ ಜೂನ್ 24ರವರೆಗೂ ಗ್ರಾಮೀಣ ಪ್ರದೇಶದಲ್ಲಿ ಶೇ. 56 ರಷ್ಟು ಡೋಸ್ ನೀಡಲಾಗಿದೆ ಎಂದು ಕೇಂದ್ರ ವರದಿ ತಿಳಿಸಿದೆ.