ಮಳವಳ್ಳಿ, ಜೂ.29 (DaijiworldNews/HR): ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ 60 ವರ್ಷ ರಾಜ್ಯ ಆಳಿದ ಕಾಂಗ್ರೆಸ್ ಮುಖಂಡರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ವಿಚಾರ ಗೊತ್ತಿರಲಿಲ್ಲವೇ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದಲಿತರು ಮುಖ್ಯಮಂತ್ರಿಯಾಗುವುದನ್ನು ನಾವು ಎಂದಿಗೂ ತಪ್ಪಿಸಿಲ್ಲ. ಅವಕಾಶ ತಪ್ಪಿಸಿದ್ದವರೇ ಈಗ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಕೊಳ್ಳುತ್ತಿದ್ದಾರೆ. ತಾನಿದ್ದರೆ ಮಾತ್ರ ಕಾಂಗ್ರೆಸ್ ಎಂದೂ ಹೇಳಿಕೊಳ್ಳುತ್ತಾರೆ" ಎಂದರು.
ಇನ್ನು "130 ಸೀಟ್ನಿಂದ 78ಕ್ಕೆ ಇಳಿಸಿದರಲ್ಲ ಅವರೇ ದಲಿತರಿಗೆ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದ್ದಾರೆ" ಎಂದು ಸಿದ್ದರಾಮಯ್ಯಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.