ಕಲಬುರಗಿ, ಜೂ.29 (DaijiworldNews/HR): ಕರ್ನಾಟಕದ ಬಿಜೆಪಿಯಲ್ಲಿನ ವಾದ- ಪ್ರತಿವಾದ ಮುಗಿದಿದ್ದು, ಈಗ ಜಡ್ಜ್ ಮೆಂಟ್ ನಿರೀಕ್ಷೆಯಲ್ಲಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಮಾರ್ಗಸೂಚಿಯಂತೆ ಬಿಜೆಪಿ ಹೈಕಮಾಂಡ್ ನವರು ಮಾರ್ಗಸೂಚಿ ಕೊಡುತ್ತಾರೆ ಎನ್ನುವ ಆಶಾ ಭಾವನೆ ಇದೆ. ನನ್ನ ಭಾವನೆಗಳನ್ನು ಹೈಕಮಾಂಡ್ ಮುಂದೆ ಹೇಳಿಕೊಂಡಿದ್ದೇನೆ. ಜಡ್ಜ್ ಮೆಂಟ್ ಏನು ಬರುತ್ತೋ ಕಾಯೋಣ. ರಮೇಶ ಜಾರಕಿಹೊಳಿ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದಲ್ಲಿ ಯಾವ ರೀತಿ ಗೊಂದಲಗಳಿಲ್ಲ. ಏನಾದರೂ ಸಮಸ್ಯೆಗಳಿದ್ದರೆ ನಾವೆಲ್ಲ ಸರಿಪಡಿಸಿಕೊಂಡು ಹೋಗುತ್ತೇವೆ" ಎಂದಿದ್ದಾರೆ.
ಇನ್ನು "ಕಾಂಗ್ರೆಸ್ ಪಕ್ಷದಲ್ಲಿ ಈಗಲೇ ಮುಂದಿನ ಸಿಎಂ ಚರ್ಚೆ ಶುರುವಾಗಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರಿಗೂ ಮುಖ್ಯಮಂತ್ರಿಯಾಗುವ ಅವಕಾಶ ಕೊಡಲ್ಲ" ಎಂದರು.
ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬಹಳಷ್ಟು ಕನಸು ಕಾಣುತ್ತಿದ್ದು, ಅವರಿಗೆ ಶಾಸಕರ ಬೆಂಬಲ ಇದ್ದ ಹಾಗೆ ಕಾಣುವುದಿಲ್ಲ" ಎಂದು ಹೇಳಿದ್ದಾರೆ.