ಲಕ್ನೋ, ಜೂ 29 (DaijiworldNews/MS): ದೇಶದಲ್ಲಿ ಅಭಿವೃದ್ದಿ ಕೆಲಸಗಳು ನಡೆಯಬೇಕಾದರೆ ನಾಗರೀಕರು ಜವಾಬ್ದಾರಿಯುತವಾಗಿ ತೆರಿಗೆಯನ್ನು ಪಾವತಿಸಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
ರಾಷ್ಟ್ರಪತಿಯಾದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರಾದ ಪರೌಂಖ್ ಗ್ರಾಮ ಜಿನ್ಜಾಕ್ ತೆರಳಿದ್ದಾರೆ. ತವರು ರಾಜ್ಯ ಉತ್ತರಪ್ರದೇಶಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಕೋವಿಂದ್ ಜಿನ್ಜಾಕ್ ರೈಲು ನಿಲ್ದಾಣದ ಸಮೀಪ ಸ್ಥಳೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.ಈ ವೇಳೆ ಜನರಲ್ಲಿ ತೆರಿಗೆ ಮಹತ್ವವನ್ನು ಹಾಸ್ಯದ ಮೂಲಕ ವಿವರಿಸಿದ್ದು ದೇಶದ ಮೊದಲ ಪ್ರಜೆಯಾಗಿರುವ ನಾನು ಮಾಸಿಕ ₹ 5 ಲಕ್ಷ ವೇತನ ಪಡೆಯುತ್ತೇನೆ, ಅದರಲ್ಲಿ ₹ 2.75 ಲಕ್ಷ ಹಣವನ್ನು ತೆರಿಗೆಗೆ ಪಾವತಿಸುತ್ತೇನೆ ಎಂದು ಹೇಳಿದ್ದಾರೆ.
ಎಲ್ಲರೂ ನಾನು ದೊಡ್ಡ ಮೊತ್ತವನ್ನೇ ಸಂಬಳವಾಗಿ ಪಡೆಯುತ್ತಿದ್ದಾರೆ ನಾನು ಎಂದುಕೊಳ್ಳುತ್ತಾರೆ. ಆದರೆ ಇದರಲ್ಲಿ ಪ್ರತಿ ತಿಂಗಳು 2.75 ಲಕ್ಷ ರೂಪಾಯಿ ತೆರಿಗೆ ಕಟ್ಟುತ್ತೇನೆ. ತಿಂಗಳ ಸಂಬಳದಲ್ಲಿ ಅರ್ಧಕ್ಕಿಂತ ಹೆಚ್ಚು ನಾನು ತೆರಿಗೆ ಕಟ್ಟುತ್ತೇನೆ. ನನಗಿಂತ ನಮ್ಮ ಅಧಿಕಾರಿಗಳು ಹೆಚ್ಚು ಉಳಿತಾಯ ಮಾಡುತ್ತಾರೆ ಎಂದು ಕೋವಿಂದ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ನಾವು ರೈಲಿಗೆ ಬೆಂಕಿ ಹಾಕಿರುವುದನ್ನು ನೋಡಿದ್ದೇವೆ. ರೈಲಿ ಹೊತ್ತಿ ಉರಿದಾಗ ಸರ್ಕಾರಕ್ಕೆ ಕೋಟಿ ಕೋಟಿ ನಷ್ಟವಾಗಿದೆ ಎಂದು ಮಾತನಾಡುತ್ತೇವೆ. ಈ ನಷ್ಟ ಯಾರದ್ದು? ತೆರಿಗೆ ಕಟ್ಟಿದವರ ಹಣವಿದೆ. ನಷ್ಟ ತೆರಿಗೆದಾತರಿಗೆ. ಹೀಗಾಗಿ ಸಾರ್ವಜನಿಕ ಆಸ್ತಿ ಪಾಸ್ತಿ ಕುರಿತು ನಮ್ಮ ದೃಷ್ಟಿಕೋನ ಬದಲಾಗಬೇಕು. ನಾವು–ನೀವು ತೆರಿಗೆ ಪಾವತಿಸಿದರೆ ಮಾತ್ರ ದೇಶದಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲು ಸಾಧ್ಯ ಎಂದು ಹೇಳುವ ಸಲುವಾಗಿ ಇಲ್ಲಿ ವೇತನದ ವಿಷಯವನ್ನು ಪ್ರಸ್ತಾಪ ಮಾಡಿದೆ ಎಂದು ಹೇಳಿದ್ದಾರೆ.