ಜಮ್ಮು-ಕಾಶ್ಮೀರ, ಜೂ.28 (DaijiworldNews/HR): ಭದ್ರತಾ ಪಡೆಯ ಮೇಲೆ ನಡೆಸಿದ ಅನೇಕ ದಾಳಿ ಪ್ರಕರಣದಲ್ಲಿ ಶಾಮೀಲಾಗಿದ್ದ ಲಷ್ಕರ್ ಎ ತೊಯ್ಬಾದ(ಎಲ್ ಇಟಿ) ಕಮಾಂಡರ್ ನದೀಮ್ ಅಬ್ರಾರ್ನನ್ನು ಭದ್ರತಾ ಪಡೆ ಸೋಮವಾರ ಬಂಧಿಸಿದೆ.
ನದೀಮ್ ಅಬ್ರಾರ್ ಹಲವಾರು ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದು, ನಮ್ಮ ಕಾರ್ಯಾಚರಣೆ ಸಿಕ್ಕ ದೊಡ್ಡ ಯಶಸ್ಸು ಇದಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇನ್ನು ಲಷ್ಕರ್ ಕಮಾಂಡರ್ ನದೀಮ್ ಬಂಧನಕ್ಕೆ ಸಂಬಂಧಿಸಿದಂತೆ ಬೇರೆ ಯಾವುದೇ ವಿವರಗಳನ್ನು ನೀಡಿಲ್ಲ.
ಮೂಲಗಳ ಪ್ರಕಾರ, ಭದ್ರತಾ ಪಡೆಗಳು ಅಬ್ರಾರ್ ಮತ್ತು ಮತ್ತೊಬ್ಬ ಶಂಕಿತನನ್ನು ನಗರದ ಹೊರವಲಯದ ಪಾರಿಂಪೋರಾ ಚೆಕ್ ಪಾಯಿಂಟ್ ನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.