ಯಾದಗಿರಿ, ಜೂ 28 (DaijiworldNews/MS): ಮಕ್ಕಳ ಸಹಿತ ಒಂದು ಕುಟುಂಬವೇ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಾಲ ಭಾದೆ ತಾಳದೆ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಸಂಶಯ ವ್ಯಕ್ತವಾಗಿದ್ದು, ದಂಪತಿಗಳಿಬ್ಬರು ತಮ್ಮ 4 ಮಕ್ಕಳ ಜತೆಗೂಡಿ ಕೃಷಿ ಹೊಂಡಕ್ಕೆ ಹಾರಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ಶವಗಳಿಗಾಗಿ ಶೋಧ ಕಾರ್ಯ ನಡೆದಿದೆ.
ಮೃತರನ್ನ ಪತಿ ಭೀಮರಾಯ ಸುರಪುರ (45), ಪತ್ನಿ ಶಾಂತಮ್ಮ (36), ಮಕ್ಕಳಾದ ಸುಮಿತ್ರಾ (12), ಶ್ರೀದೇವಿ (12), ಲಕ್ಷ್ಮಿ (8), ಶಿವರಾಜ್ (9) ಎಂದು ಗುರುತಿಸಲಾಗಿದೆ. ಇನ್ನು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.