ಬೆಂಗಳೂರು, ಜೂ.28 (DaijiworldNews/HR): ಶಾಲೆ ಆರಂಭಕ್ಕೆ ಬಹಳ ಎಚ್ಚರಿಕೆ ವಹಿಸಬೇಕೆಂದು ಏಮ್ಸ್ ಮುಖ್ಯಸ್ಥರು ಪತ್ರ ಬರೆದಿದ್ದು, ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡಿ. ಶಾಲೆ ತೆರೆಯಲು ಅವಸರ ಬೇಡ ಎಂದು ಸೂಚಿಸಿದ್ದಾರೆ ಎಂದು ಆರೋಗ್ಯ ಸಚಿವ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 24,37,732 ಜನ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿದ್ದು, ಇಂದಿನಿಂದ ಲಸಿಕೆ ನೀಡುತ್ತಿದ್ದೇವೆ. ಹತ್ತು ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಲು ಚಿಂತನೆ ನಡೆಸಲಾಗುತ್ತಿದೆ" ಎಂದರು.
"ಕರ್ನಾಟಕದಲ್ಲಿ ಲಸಿಕೆ ಪ್ರಮಾಣ ಕಡಿಮೆ ಇದ್ದು, ಇನ್ನೆರಡು ದಿನದಲ್ಲಿ ದೆಹಲಿಗೆ ಭೇಟಿ ನೀಡಲಿದ್ದೇನೆ. ಅಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸುವಂತೆ ಮಾತನಾಡುತ್ತೇನೆ. ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭಿಸುತ್ತೇವೆ" ಎಂದಿದ್ದಾರೆ.
ಇನ್ನು "ಶಾಲೆ ಆರಂಭಕ್ಕೆ ಬಹಳ ಎಚ್ಚರಿಕೆ ವಹಿಸಬೇಕು, ಶಾಲೆ ತೆರೆಯಲು ಅವಸರ ಬೇಡ ಎಂದು ಏಮ್ಸ್ ಮುಖ್ಯಸ್ಥರು ಪತ್ರ ಬರೆದು ಸೂಚಿಸಿದ್ದಾರೆ. ಅನ್ ಲಾಕ್ ಮಾಡಿರುವ ಅವಧಿ ಜುಲೈ 5 ರವರೆಗೂ ಇದೆ ಎಂದು ತಿಳಿಸಿದ್ದಾರೆ.