ಜಮ್ಮು, ಜೂ 28 (DaijiworldNews/PY): ಜಮ್ಮುವಿನ ವಾಯುಪಡೆ ಕೇಂದ್ರದಲ್ಲಿ ಸ್ಪೋಟಗೊಂಡ ಬಳಿಕ ಇದೀಗ ಜಮ್ಮುವಿನ ಕಲುಚಕ್ ಮಿಲಿಟರ್ ಕೇಂದ್ರದಲ್ಲಿ ಸೋಮವಾರ ಡ್ರೋನ್ ಕಾಣಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಬೆಳಗ್ಗಿನ ಜಾವ ಮೂರು ಗಂಟೆಗೆ ಕಲುಚಕ್ ಮಿಲಿಟರಿ ಸ್ಟೇಶನ್ ಬಳಿ ಡ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ ಸೇನೆ ಅಲರ್ಟ್ ಆಗಿದ್ದು, 20-25 ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಡ್ರೋನ್ ಮರೆಯಾಗಿದೆ. ಸದ್ಯ ಸೇನೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಜಮ್ಮುವಿನ ವಾಯುಪಡೆ ಕೇಂದ್ರದ ದಾಳಿ ನಡೆದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ 1.37 ಹಾಗೂ 1.42ಕ್ಕೆ ದಾಳಿ ನಡೆದಿತ್ತು. ಮೊದಲ ದಾಳಿಗೆ ಮೇಲ್ಛಾವಣಿಗೆ ಹಾನಿಯಾಗಿದ್ದು, ಎರಡನೇ ದಾಳಿ ಬಯಲು ಪ್ರದೇಶದಲ್ಲಿ ನಡೆದಿತ್ತು.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.