ನವದೆಹಲಿ, ಜೂ 28 (DaijiworldNews/PY): "ಸೋತು ಸುಣ್ಣವಾಗಿರುವ ಕಾಂಗ್ರೆಸ್ ಚುನಾವಣೆ ಗೆಲ್ಲಲು ಹೆಣಗಾಡುತ್ತಿದೆ. ಚುನಾವಣೆಯಲ್ಲಿ ಸೋತು ಮೂಲೆಗುಂಪಾದವರೆಲ್ಲಾ ಸಿಎಂ ಸ್ಥಾನದ ಆಕಾಂಕ್ಷಿಗಳು" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಅಧಿಕಾರಕ್ಕಡ ಬರಲು ಏದುಸಿರುವ ಬಿಡುತ್ತಿದೆ. ಕಾಂಗ್ರೆಸ್ನಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿ ಹನುಮಂತದ ಬಾಲದಂತೆ ಬೆಳೆಯುತ್ತಿದೆ. ರಾಜ್ಯದಲ್ಲಿ ಚುನಾವಣೆ ನಡೆಯಲು ಇನ್ನೂ ಎರಡು ವರ್ಷ ಬೇಕು" ಎಂದಿದ್ದಾರೆ.
"ಅನೇಕ ಮಂದಿ ಚುನಾವಣೆಗೂ ಮುನ್ನ ಸಿಎಂ ಆಗಲು ಕುರ್ಚಿ ಮೇಲೆ ಟವಲ್ ಹಾಕಿದ್ದಾರೆ. ನಾವೇ 2018ರಲ್ಲಿ ಅಧಿಕಾರಕ್ಕೇರುತ್ತೇವೆ ಎಂದು ಕನಸು ಕಂಡವರ ಪರಿಸ್ಥಿತಿ ಈಗ ಏನಾಗಿದೆ. ಮೊದಲು ಚುನಾವಣೆ ಗೆದ್ದು ಅಧಿಕಾರಕ್ಕೆ ಬನ್ನಿ. ನಂತರ ಸಿಎಂ ಅಭ್ಯರ್ಥಿ ಯಾರಾಗಬೇಕು ಎನ್ನುವ ಬಗ್ಗೆ ತೀರ್ಮಾನಿಸಿ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ನಲ್ಲಿ ದಿನಕ್ಕೊಬ್ಬರಂತೆ ಸಿಎಂ ಆಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಕೈ ಹಿಡಿಯುವುದಿಲ್ಲ. ಕಾಂಗ್ರೆಸ್ ಇಲ್ಲಿಯವರೆಗೂ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಓಟ್ಬ್ಯಾಂಕ್ ಮಾಡಿಕೊಂಡು ಮೂಗಿಗೆ ತುಪ್ಪ ಸವರಿತು" ಎಂದಿದ್ದಾರೆ.
"ಸಿ.ಎಂ. ಇಬ್ರಾಹಿಂ ನಾನು ಕೂಡಾ ಆಕಾಂಕ್ಷಿ ಎಂದು ಹೇಳಿದರಲ್ಲಿ ತಪ್ಪೇನಿಲ್ಲ. ನಾನು ಅವರ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸಮುದಾಯಕ್ಕೆ ನ್ಯಾಯ ಒದಗಿಸುವುದಾದಲ್ಲಿ ಖಂಡಿತ ಆಗಲಿ. ಸದಕ್ಕೆ ನನ್ನ ಬೆಂಬಲ ಕೂಡಾ ಇದೆ" ಎಂದು ಹೇಳಿದ್ದಾರೆ.
"ದಲಿತರ ಹೆಸರು ಹೇಳಿಕೊಂಡು ಅವರ ಮೂಗಿಗೆ ತುಪ್ಪ ಸವರಿದ್ದೀರಿ. ಅಲ್ಪಸಂಖ್ಯಾತರಿಗಾದರೂ ಕಡೆ ಪಕ್ಷ ಅವಕಾಶ ನೀಡಿ. ತನ್ವೀರ್ ಸೇಠ್, ಸಿ.ಎಂ.ಇಬ್ರಾಹಿಂ, ಜಮೀರ್ ಅಹಮ್ಮದ್ ಯಾರೇ ಸಿಎಂ ಆದರೂ ನನ್ನ ಬೆಂಬಲಿವಿದೆ" ಎಂದು ತಿಳಿಸಿದ್ದಾರೆ.