ನವದೆಹಲಿ, ಜೂ 28 (DaijiworldNews/MS): ಕೋವಿಡ್-19 ರ ಮೂರನೇ ಅಲೆಯು ಬರುವ ಆತಂಕದ ನಡುವೆ ಮಕ್ಕಳಿಗೆ ಲಸಿಕೆ ಯಾವಾಗ ಎಂಬ ಪ್ರಶ್ನೆಯೂ ಕಾಡಲಾರಂಭಿಸಿದೆ. ಈ ನಡುವೆ ಝೈಡಸ್ ಕ್ಯಾಡಿಲಾ ಲಸಿಕೆಯನ್ನು ೧೨ ರಿಂದ 18 ವಯಸ್ಸಿನವರಿಗೆ ನೀಡುವ ಪ್ರಯೋಗ ಅಂತಿಮ ಹಂತ ತಲುಪಿದ್ದು , ಜುಲೈ ಅಂತ್ಯದ ವೇಳೆಗೆ ಅಥವಾ ಆಗಸ್ಟ್ ನಲ್ಲಿ ಲಸಿಕೆಯನ್ನು ನೀಡಲು ಪ್ರಾರಂಭಿಸಬಹುದು ಎಂದು ಐಸಿಎಂಆರ್ ನ ಕೋವೀಡ್ ವರ್ಕಿಂಗ್ ಗ್ರೂಪ್ ನ್ ಅಧ್ಯಕ್ಷಡಾ. ಅರೋರಾ ಹೇಳಿದ್ದಾರೆ.
ಝೈಡಸ್ ಶೀಘ್ರದಲ್ಲೇ ತನ್ನ ಲಸಿಕೆ ಝೈಕೋವಿ-ಡಿಗೆ ತುರ್ತು ಬಳಕೆಯ ದೃಢೀಕರಣಕ್ಕಾಗಿ ಭಾರತದ ಔಷಧ ನಿಯಂತ್ರಕ ಜನರಲ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದ್ದು ಇದನ್ನು ವಯಸ್ಕರು ಮತ್ತು ಮಕ್ಕಳು ಇಬ್ಬರಿಗೂ ನೀಡಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಹೇಳಿದೆ
ಎಐಐಎಂಎಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಅವರು ಕೋವಿಡ್-19 ಲಸಿಕೆಯನ್ನು ಮಕ್ಕಳಿಗೆ ಲಭ್ಯವಾಗುವಂತೆ ಮಾಡುವುದು ಮೈಲಿಗಲ್ಲು ಸಾಧನೆಯಾಗಿದೆ ಮತ್ತು ಶಾಲೆಗಳನ್ನು ಪುನರಾರಂಭಿಸಲು ಮತ್ತು ಅವರಿಗೆ ಹೊರಾಂಗಣ ಚಟುವಟಿಕೆಗಳನ್ನು ಪುನರಾರಂಭಿಸಲು ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಭಾರತ್ ಬಯೋಟೆಕ್ ನ ಕೊವಾಕ್ಸಿನ್ ನ 2-18 ವರ್ಷ ವಯಸ್ಸಿನವರ 2 ಮತ್ತು 3ನೇ ಹಂತದ ಪ್ರಯೋಗದ ದತ್ತಾಂಶವನ್ನು ಸೆಪ್ಟೆಂಬರ್ ವೇಳೆಗೆ ನಿರೀಕ್ಷಿಸಲಾಗಿದೆ. 'ಫೈಜರ್ ಲಸಿಕೆಯು ಅದಕ್ಕೂ ಮೊದಲು ಅನುಮೋದನೆ ಪಡೆದರೆ, ಅದು ಮಕ್ಕಳಿಗೂ ಒಂದು ಆಯ್ಕೆಯಾಗಬಹುದು. ಔಷಧ ನಿಯಂತ್ರಕರಿಂದ ಅನುಮೋದನೆ ಪಡೆದ ನಂತರ ಆ ಸಮಯದಲ್ಲಿ ಭಾರತದ ಮಕ್ಕಳಿಗೆ ಲಸಿಕೆ ಲಭ್ಯವಾಗಬಹುದು ಎಂದು ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.