ರಾಯಪುರ, ಜೂ 27 (DaijiworldNews/PY): ಭಾನುವಾರ ಛತ್ತೀಸ್ಗಡದ ದಾಂತೇವಾಡ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ನಕ್ಸಲ್ ಹತನಾಗಿದ್ದಾನೆ.
ಸಾಂದರ್ಭಿಕ ಚಿತ್ರ
ಮೃತ ನಕ್ಸಲನನ್ನು ಸಂತೋಷ್ ಮಾರ್ಕಂ ಎಂದು ಗುರುತಿಸಲಾಗಿದೆ. ಈತ ಮಲಂಗಿರಿ ಪ್ರದೇಶದಲ್ಲಿ ಸಕ್ರೂಯನಾಗಿದ್ದ ನಕ್ಸಲ್ ಗುಂಪಿನ ಸದಸ್ಯನಾಗಿದ್ದ.
"ಈತನ ವಿರುದ್ದ ಸುಮಾರು 25 ಪ್ರಕರಣಗಳು ದಾಖಲಾಗಿದ್ದು, ಸರ್ಕಾರವು ಇವನ ಪತ್ತೆಗಾಗಿ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು" ಎಂದು ಪೊಲೀಸರು ತಿಳಿಸಿದ್ದಾರೆ.
"ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಸಂದರ್ಭ ಡಿಆರ್ಜಿ ಹಾಗೂ ನಕ್ಸಲ್ರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಓರ್ವ ನಕ್ಸಲ್ ಸಾವನ್ನಪ್ಪಿದ್ದು, ಉಳಿದ ನಕ್ಸಲರು ಪರಾರಿಯಾಗಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
"ಘಟನಾ ಸ್ಥಳದಿಂದ ಪಿಸ್ತೂಲ್ ಹಾಗೂ ದಿನಬಳಕೆಯ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.