ಬೆಂಗಳೂರು, ಜೂ.27 (DaijiworldNews/HR): ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ಕೊಡುವ ಅಧಿಕಾರ ಶಾಸಕರಿಗಿಲ್ಲ. ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಮಾಡಿ ಎಂದು ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಹಮಾನ್ ಖಾನ್ , "ಶಾಸಕರು ಬೇಕಾದರೆ ಕೆಪಿಸಿಸಿ ಕಚೇರಿಗೆ ಹೋಗಿ ಅಧ್ಯಕ್ಷರಿಗೆ ಹೇಳಿ. ಎಐಸಿಸಿಗೆ ಹೋಗಿ ಅಧ್ಯಕ್ಷರಿಗೆ ತಿಳಿಸಿ. ಆದರೆ ಪಕ್ಷಕ್ಕೆ ಬಂದ ಮೇಲೆ ಪಕ್ಷದ ಸಂಪ್ರದಾಯವನ್ನು ನಾವು ಅನುಸರಿಸಿಬೇಕು" ಎಂದಿದ್ದಾರೆ.
ಇನ್ನು ಇಂದು ಶಿಸ್ತು ಸಮಿತಿ ಸಭೆ ನಡೆಸಿದ್ದು, ಇತ್ತೀಚೆಗೆ ಕೆಲ ಶಾಸಕರು ನೀಡಿರುವ ಹೇಳಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂದಿನ ಸಿಎಂ ಹೇಳಿಕೆಯಿಂದ ಶಿಸ್ತು ಉಲ್ಲಂಘನೆಯಾಗಿದೆ. ಇದರ ಬಗ್ಗೆ ಸುಧೀರ್ಘ ಚರ್ಚೆಯಾಗಿದೆ. ಶಾಸಕರು ಏನು ಹೇಳಿಕೆ ಕೊಟ್ಟಿರುವುದರ ಬಗ್ಗೆ ಮಾಹಿತಿ ಇನ್ನೂ ಬೇಕಿದೆ. ದಾಖಲೆ ಕಲೆ ಹಾಕಬೇಕಿದೆ. ಹೀಗಾಗಿ ಮುಂದಿನ ವಾರಕ್ಕೆ ಸಭೆ ಮುಂದೂಡಿಕೆಯಾಗಿದೆ" ಎಂದು ಹೇಳಿದ್ದಾರೆ.