ಭೊಪಾಲ್, ಜೂ.27 (DaijiworldNews/HR): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೊರೊನಾ ಲಸಿಕೆ ಬಗ್ಗೆ ನೀವು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, "ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುವ ಭರವಸೆ ನೀಡಿದ್ದಾರೆ. ಆದರೆ ರಾಹುಲ್ ಗಾಂಧಿ ಅವರು ಲಸಿಕೆ ಬಗ್ಗೆ ಹರಡುತ್ತಿರುವ ಸುಳ್ಳುಗಳು, ತಪ್ಪು ಗ್ರಹಿಕೆಗಳು ಜನರ ಜೀವವನ್ನು ಅಪಾಯಕ್ಕೆ ದೂಡುತ್ತಿವೆ" ಎಂದು ಆರೋಪಿದ್ದಾರೆ.
ಇನ್ನು ಬೈತೂಲ್ ಜಿಲ್ಲೆಯ ದುಲಾರಿಯಾ ಗ್ರಾಮದ ಜನರ ಜತೆ ದೂರವಾಣಿ ಮೂಲಕ ಪ್ರಧಾನಿ ಮಾತನಾಡಿ, ಲಸಿಕೆ ಕುರಿತು ಗ್ರಾಮಸ್ಥರಲ್ಲಿ ಇರುವ ಹಿಂಜರಿಕೆ ತೊಲಗಿಸಲು ಯತ್ನಿಸಿದ್ದಾರೆ ಎಂದೂ ಚೌಹಾಣ್ ಹೇಳಿದ್ದಾರೆ.