ಧಾರವಾಡ, ಜೂ 27 (DaijiworldNews/PY): "ಕೇಂದ್ರ ಮಂತ್ರಿ ಮಂಡಲದ ವಿಸ್ತರಣೆ ಪ್ರಧಾನಿ ನರೇಂದ್ರ ಮೋದಿ ಅವರ ಪರಮಾಧಿಕಾರವಾಗಿದೆ. ಈ ಬಗ್ಗೆ ನಮಗೆ ಮಾತನಾಡುವ ಅಧಿಕಾರ ಇಲ್ಲ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೇಂದ್ರ ಮಂತ್ರಿ ಮಂಡಲ ವಿಸ್ತರಣೆ ವಿಚಾರದ ಬಗ್ಗೆ ನಮಗೇನು ತಿಳಿದಿಲ್ಲ. ಈ ಬಗ್ಗೆ ಪ್ರಧಾನಿ ಮೋದಿ ಅವರು ಸೂಕ್ತ ವೇಳೆಯಲ್ಲಿ ಉತ್ತಮವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದರು.
ಸುತ್ತೂರು ಮಠಕ್ಕೆ ಬಿಜೆಪಿ ಮುಖಂಡರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿ ಮುಖಂಡರ ಭೇಟಿಯನ್ನು ರಾಜಕೀಯ ಎನ್ನಲು ಸಾಧ್ಯವಿಲ್ಲ. ಬಿಜೆಪಿ ವಿವಿಯ ಕುಲಪತಿಗಳು ಸಚಿವ ಯೋಗೇಶ್ವರ ಅವರು ಬರೆದ ಪರೀಕ್ಷೆಗೆ ಫಲಿತಾಂಶ ನೀಡಿದ್ದಾರೆ" ಎಂದು ಲೇವಡಿ ಮಾಡಿದರು.
ಪೆಟ್ರೋಲ್ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಬೆಲೆ ಇಳಿಕೆ ಬಗ್ಗೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದರು