ಚಾಮರಾಜನಗರ,ಜೂ.27 (DaijiworldNews/HR): ಚಾಮರಾಜನಗರದಲ್ಲಿ ನಡೆದ ದುರಂತಕ್ಕೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ರಾಜ್ಯ ಬಿಜೆಪಿ ಸರ್ಕಾರವು 36 ಜನರನ್ನು ಆಕ್ಸಿಜನ್ ಇಲ್ಲದೇ ಸಾವನ್ನಪ್ಪುವಂತೆ ಮಾಡಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಚಾಮರಾಜನಗರಕ್ಕೆ ಬರುವ ಧೈರ್ಯಬನ್ನು ಮುಖ್ಯಮಂತ್ರಿ ಮಾಡುತ್ತಿಲ್ಲ. ಅವರಿಗೆ ಕುರ್ಚಿ ಉಳಿಸಿಕೊಳ್ಳುವುದು ಮುಖ್ಯ. ಆಕ್ಸಿಜನ್ ದುರಂತದಿಂದ 36 ಜನರು ಸಾಯಲು ರಾಜ್ಯ ಸರ್ಕಾರ ಕಾರಣವಾಗಿದೆ, ಅದಕ್ಕಾಗಿಯೇ ಚಾಮರಾಜನಗರಕ್ಕೆ ಬಂದರೆ ಜನ ಹೊಡೆಯುತ್ತಾರೆ ಎಂಬ ಭಯ ಅವರಿಗಿದೆ" ಎಂದಿದ್ದಾರೆ.
ಇನ್ನು ಯಡಿಯೂರಪ್ಪ ಅವರಿಗೆ ಜನ ಹೊಡೆಯುತ್ತಾರೆ ಎಂದು ಗುಪ್ತಚರ ಇಲಾಖೆ ಕೂಡ ಅವರಿಗೆ ಮಾಹಿತಿಯನ್ನು ನೀಡಿದ್ದು, ಅದಕ್ಕೆ ಭಯದಿಂದ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದರೆ ಜನ ಬೈಯುತ್ತಾರೆ. ತಪ್ಪು ಮಾಡಿದ ಮೇಲೆ ಬೈಸಿಕೊಳ್ಳಲೇಬೇಕು" ಎಂದು ಹೇಳಿದ್ದಾರೆ.