ನವದೆಹಲಿ, ಜೂ.27 (DaijiworldNews/HR): ಇ ಕಾಮರ್ಸ್ ಸಂಸ್ಥೆಗಳು ದೇಶದ ಕಾನೂನು ಮತ್ತು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಇ ಕಾಮರ್ಸ್ ಸಂಸ್ಥೆಗಳು, ಗ್ರಾಹಕರ ಹಿತದೃಷ್ಟಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಸರ್ಕಾರ ಇ ಕಾಮರ್ಸ್ ಮತ್ತು ಮಾರ್ಕೆಟ್ಪ್ಲೇಸ್ ನಿಯಂತ್ರಣಕ್ಕೆ ಸೂಕ್ತ ನಿಯಮ ಜಾರಿಗೆ ಮುಂದಾಗಿದೆ" ಎಂದರು.
"ಇನ್ನು ಭಾರತದ ಮಾರುಕಟ್ಟೆ ದೊಡ್ಡದಾಗಿದ್ದು, ಇಲ್ಲಿ ಎಲ್ಲರನ್ನೂ ಸ್ವಾಗತಿಸುತ್ತೇವೆ. ಆದರೆ ನೆಲದ ಕಾನೂನು ಮತ್ತು ನಿಯಮಗಳು ಎಲ್ಲರಿಗೂ ಅನ್ವಯವಾಗುತ್ತವೆ. ಅವುಗಳನ್ನು ಪಾಲಿಸುವುದು ಅಗತ್ಯ" ಎಂದು ಹೇಳಿದ್ದಾರೆ.