ಜಮ್ಮು, ಜೂ 27 (DaijiworldNews/PY): ಭಾನುವಾರ ಬೆಳಗ್ಗೆ ಜಮ್ಮು ವಾಯುಪಡೆ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಎರಡು ಬಾರಿ ಸ್ಪೋಟದ ಸದ್ದು ಕೇಳಿಸಿದೆ.
ಶನಿವಾರ ತಡರಾತ್ರಿ 1.45ರ ಸುಮಾರಿಗಡ ಐದು ನಿಮಿಷಗಳ ಅಂತರದಲ್ಲಿ ಸ್ಪೋಟದ ಸದ್ದು ಕೇಳಿಬಂದಿದೆ. ಸ್ಪೋಟದ ಪರಿಣಾಮ ಕಟ್ಟಡವೊಂದರ ಮೇಲ್ಛಾವಣಿ ಕುಸಿದಿದ್ದರೆ, ಮತ್ತೊಂದು ಸ್ಪೋಟದಿಂದ ಕಟ್ಟಡದ ನೆಲಭಾಗಕ್ಕೆ ಹಾನಿಯಾಗಿದೆ.
ವಾಯುಪಡೆಗೆ ಸೇರಿದ ಜಮ್ಮುವಿನ ವಿಮಾನ ನಿಲ್ದಾಣದೊಳಗೆ ಸ್ಫೋಟ ಸಂಭವಿಸಿದ್ದು, ಯಾವುದೇ ಸಿಬ್ಬಂದಿಗೆ ಗಾಯ ಅಥವಾ ಹಾನಿಯಾದ ವರದಿಯಾಗಿಲ್ಲ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಭದ್ರತಾ ಪಡೆಗಳ ಮುಖ್ಯಸ್ಥರು, ಬಾಂಬ್ ನಿಷ್ಕ್ರಿಯ ದಳ, ವಿಧಿವಿಜ್ಞಾನ ತಂಡ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
"ಘಟನಾ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.