ನವದೆಹಲಿ, ಜೂ 27 (DaijiworldNews/PY): "ಭಾರತದಲ್ಲಿ 12-18 ವರ್ಷ ವಯಸ್ಸಿನ ಮಕ್ಕಳಿಗೆ ಶೀಘ್ರವೇ ಝೈಡಸ್ ಕ್ಯಾಡಿಲಾ ಕೊರೊನಾ ಲಸಿಕೆ ಲಭ್ಯವಾಗಲಿದೆ" ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
"12-18 ವರ್ಷ ವಯಸ್ಸಿನವರ ಮೇಲೆ ಝೈಡಸ್ ಕ್ಯಾಡಿಲಾ ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಣ ಪೂರ್ಣವಾಗಿದ್ದು, ಇದರ ಬಳಕೆಗೆ ಅನುಮೋದನೆ ದೊರೆಯುವುದು ಮಾತ್ರವೇ ಬಾಕಿ" ಎಂದು ಕೇಂದ್ರ ಸರ್ಕಾರ ಹೇಳಿದೆ.
"2-18 ವರ್ಷ ವಯಸ್ಸಿನವರ ಮೇಲೆ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ನಡೆಸಲು ಡಿಸಿಐಜಿ ಮೇ 12ರಂದು ಅನುಮತಿ ನೀಡಿತ್ತು" ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
"ದೇಶದಲ್ಲಿ 18 ವರ್ಷ ಮೇಲ್ಪಟ್ಟ 93-94 ಕೋಟಿ ಜನರಿದ್ದಾರೆ. ಇವರಿಗೆ ಲಸಿಕೆ ನೀಡಲು 186.6 ಕೋಟಿ ಡೋಸ್ನ ಅಗತ್ಯವಿದೆ" ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮಾಹಿತಿ ನೀಡಿದೆ.