ನವದೆಹಲಿ, ಜೂ. 26(DaijiworldNews/HR): ಜಮ್ಮು ಹಾಗೂ ಕಾಶ್ಮೀರದಲ್ಲಿ 370 ಮತ್ತು 35 ಎ ವಿಧಿಯು ಮತ್ತೆ ಸ್ಥಾಪನೆಯಾಗುವವರೆಗೂ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಈ ಕುರಿತು ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಆರ್ಟಿಕಲ್ 370 ಹಾಗೂ 35 ಎ ಪುನಃಸ್ಥಾಪನೆ ಮಾಡುವುದನ್ನು ಕೇಂದ್ರ ಸರ್ಕಾರವು ಒಂದು ತಟ್ಟೆಯಲ್ಲಿ ನೀಡುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ನೀವು ಎಲ್ಲೋ ಪ್ರಾರಂಭಿಸಬೇಕು. ಅದಕ್ಕಾಗಿ ನಾವು ಹೋರಾಡುತ್ತೇವೆ" ಎಂದರು.
ಇನ್ನು "ಕೇಂದ್ರ ಸರ್ಕಾರವು ತಮ್ಮ ಸ್ವಂತ ಚುನಾವಣಾ ಲಾಭಕ್ಕಾಗಿ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಭಾರತೀಯ ಸಂವಿಧಾನವನ್ನು ತಿರಸ್ಕರಿಸಿದ್ದಾರೆ'' ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ವಿಧಿ 370 ಹಾಗೂ 35 ಎ ಅನ್ನು 2019 ರಲ್ಲಿ ರದ್ದುಪಡಿಸಲಾಗಿತ್ತು.