ನವದೆಹಲಿ, ಜೂ. 26(DaijiworldNews/HR): "ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 1.45 ಕೋಟಿಗೂ ಅಧಿಕ ಕೊರೊನಾ ಲಸಿಕೆಯ ಡೋಸ್ಗಳು ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ತಿಳಿಸಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, "ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 1.45 ಕೋಟಿಗೂ ಅಧಿಕ ಕೊರೊನಾ ಲಸಿಕೆಯ ಡೋಸ್ಗಳು ಲಭ್ಯವಿದ್ದು, ಮುಂದಿನ ಮೂರು ದಿನಗಳಲ್ಲಿ 19,10,650 ಡೋಸ್ಗಳನ್ನು ನೀಡಲಾಗುವುದು" ಎಂದಿದೆ.
ಇನ್ನು ಈವರೆಗೆ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ 31.17 ಕೋಟಿಗೂ ಹೆಚ್ಚು ಡೋಸ್ಗಳನ್ನು ವಿತರಿಸಿದೆ.
"31.17 ಕೋಟಿ ಲಸಿಕೆಯಲ್ಲಿ ಪೋಲಾಗಿರುವ ಲಸಿಕೆ ಸೇರಿ ಒಟ್ಟು 29,71,80,733 ಡೋಸ್ಗಳನ್ನು ಉಪಯೋಗಿಸಲಾಗಿದ್ದು, 1.45 ಕೋಟಿ (1,45,21,067) ಡೋಸ್ಗಳು ಬಾಕಿ ಉಳಿದಿವೆ" ಎಂದು ಸಚಿವಾಲಯ ಮಾಹಿತಿ ನೀಡಿದೆ.