ನವದೆಹಲಿ, ಜೂ 26 (DaijiworldNews/MS): ಭಾರತವನ್ನು ವಿಶ್ವಗುರು ಮಾಡುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದ್ದು ವಿಶ್ವ ಗುರು ಬದಲು ವಿಶ್ವ ಬಿಕಾರಿಯಾನ್ನಗಿಸಲು ಹೊರಟಿದೆ ಎಂದು ಹೇಳಿದೆ.
ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ಬಗ್ಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಜಂಕರ್ ವಾಗ್ದಾಳಿ ನಡೆಸಿದ್ದು, ಭಾರತವು ವಿಶ್ವ ಬಿಕಾರಿಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು.
ವಿಶ್ವಗುರು ಆಗುತ್ತದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪ್ರಧಾನಿ ಮೋದಿಯವರ ಕೊವೀಡ್ ಕಳಪೆ ನಿರ್ವಹಣೆ ಪ್ರತಿಬಿಂಬಿವಾಗಿ ವಿಶ್ವ ಬಿಕಾರಿಯಂತೆ ನಾವು ಎಲ್ಲೆಡೆಯಿಂದ ಸಹಾಯವನ್ನು ಪಡೆಯುತ್ತಿದ್ದೇವೆ ನಿತ್ಯ ಆಕ್ಸಿಜನ್ ಹೊತ್ತ ವಿಮಾನಗಳು ವಿದೇಶದಿಂದ ಬರುವುದನ್ನು ಕಾಯುತ್ತಿದ್ದೇವೆ. ಪ್ರಪಂಚದ ಎದುರು ಭಾರತ ಆಕ್ಸಿಜನ್ಗಾಗಿ ಕೈಚಾಚಿ ಕೂತಿದೆಎಂದು ವಾಗ್ದಾಳಿ ನಡೆಸಿದರು.