ಕೊಚ್ಚಿ, ಜೂ 26 (DaijiworldNews/PY): "ದೇಶಿಯ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಾಣವಾಗಿರುವ ವಿಮಾನ ವಾಹಕ ನೌಕೆಯನ್ನು ಮುಂದಿನ ವರ್ಷ ಲೋಕಾರ್ಪಣೆಗೊಳಿಸಲಾಗುತ್ತದೆ" ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಕೊಚ್ಚಿ ಬಂದರು ಪ್ರದೇಶದ ಹಡಗು ನಿರ್ಮಾಣ ಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಈ ಮಾಹಿತಿ ನೀಡಿದ್ದಾರೆ.
"ಮುಂಬರುವ ವರ್ಷ ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಸಂದರ್ಭ ಸಿಗಲಿರುವ ದೊರಯಲಿರುವ ದೊಡ್ಡ ಉಡುಗೊರೆ ಇದಾಗಿರಲಿದೆ" ಎಂದಿದ್ದಾರೆ.
ಇದನ್ನು ಆತ್ಮನಿರ್ಭರ ಭಾರತ ಪರಿಕಲ್ಪನೆಯ ಅನ್ವಯ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಗೆ ಎನ್ಡಿಎ ಆಡಳಿತದ ಅವಧಿಯ ವೇಳೆಯೇ ಒಪ್ಪಿಗೆ ನೀಡಲಾಗಿತ್ತು.