ಬೆಂಗಳೂರು, ಜೂ. 25 (DaijiworldNews/SM): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಇಳಿಮುಖರಾಗುತ್ತಿದೆ. ಶುಕ್ರವಾರದಂದು ರಾಜ್ಯದಲ್ಲಿ 3310 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ ಶುಕ್ರವಾರ 114 ಮಂದಿ ಸೋಂಕಿಗೆ ಬಲಿಯಾಗಿದ್ದು ಆ ಮೂಲಕ ಒಟ್ಟು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 34539ಕ್ಕೆ ಏರಿಕೆಯಾಗಿದೆ.
ಇನ್ನು ಇಂದು 6524 ಮಂದಿ ಗುಣಮುಖರಾಗಿದ್ದು, 2684997 ಮಂದಿ ಇಲ್ಲಿಯ ತನಕ ಗುಣಮುಖರಾದಂತಾಗಿದೆ. ರಾಜ್ಯದಲ್ಲಿ ಒಟ್ಟು 2826754 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಪ್ರಸ್ತುತ 107195 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.