ನವದೆಹಲಿ, ಜೂ. 25 (DaijiworldNews/SM): ದೇಶದಲ್ಲಿ ಪ್ರಸ್ತುತ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದ್ದು, ಕೆಲವು ಪ್ರದೇಶಗಳಲ್ಲಿ ಕೋವಿಡ್ ಶೀಲ್ಡ್, ಇನ್ನು ಕೆಲವು ಕಡೆಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯಾಗುತ್ತಿದೆ. ಈ ಎರಡೂ ಲಸಿಕೆಗಳು(ಕೋವಿಶೀಲ್ಡ್ ಮತ್ತು ಕೋವಾಕ್ಸಿನ್) ಎಲ್ಲಾ ಕೊರೋನಾ ರೂಪಾಂತರ ವಿರುದ್ಧ ಹೋರಾಡುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಶುಕ್ರವಾರ ಹೇಳಿದ್ದಾರೆ.
ಆ ಮೂಲಕ ಜನರಲ್ಲಿರುವ ಗೊಂದಲಗಳಿಗೆ ಸ್ಪಷ್ಟನೆ ಸಿಕ್ಕಂತಾಗಿದೆ. ಪ್ರಸ್ತುತ 12 ರಾಷ್ಟ್ರಗಳಿರುವ ಡೆಲ್ಟಾ ಪ್ಲಸ್, ಸಾರ್ಸ್ ಕೋವ್ 2 ರೂಪಾಂತರಗಳಾದ ಅಲ್ಫಾ, ಬೆಟಾ, ಗಾಮ ಸೇರಿದಂತೆ ಎಲ್ಲಾ ನಾಲ್ಕು ಕೊರೋನಾ ರೂಪಾಂತರ ವಿರುದ್ಧ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಮಹಾ ನಿರ್ದೇಶಕ ಬಲರಾಮ್ ಸ್ಪಷ್ಟಪಡಿಸಿದ್ದಾರೆ.
ಆಲ್ಫಾ, ಬೆಟಾ, ಗಾಮಾ ಮತ್ತು ಡೆಲ್ಟಾಕ್ಕಾಗಿ ಅದೇ ಪರೀಕ್ಷೆಯನ್ನು ಮಾಡುತ್ತಿದ್ದೇವೆ. ಲಸಿಕೆ ಪರಿಣಾಮವನ್ನು ಪರೀಕ್ಷಿಸಲು ಪ್ರಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಸುಮಾರು 7 ರಿಂದ 10 ದಿನಗಳ ಅವಧಿಯಲ್ಲಿ ನಾವು ಫಲಿತಾಂಶಗಳನ್ನು ತರಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.