ನವದೆಹಲಿ, ಜೂ.25 (DaijiworldNews/HR): ಅನೇಕ ನಾಯಕರ ಟ್ವಿಟ್ಟರ್ ಖಾತೆಯಿಂದ ಈಗಾಗಲೇ ಬ್ಲೂ ಟಿಕ್ ತೆಗೆದು ಹಾಕಿರುವ ಟ್ವೀಟರ್, ಇದೀಗ ಕೇಂದ್ರ ಪ್ರಸಾರ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಅವರ ಖಾತೆಗೆ ಪ್ರವೇಶವನ್ನು ಟ್ವಿಟರ್ ನಿರಾಕರಿಸಿದೆ.
ಈ ಕುರಿತು ಮತ್ತೊಂದು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು, ಟ್ವಿಟ್ಟರ್ ನನ್ನ ಖಾತೆಯನ್ನು ಪ್ರವೇಶಿಸುವುದಕ್ಕೆ ನಿರ್ಬಂಧಿಸಿದ್ದು, ಈ ಬಗ್ಗೆ ಮಾಹಿತಿ ಪಡೆದಾಗ, ತಾವು ಯುಎಸ್ಎಯ ಡಿಜಿಟಲ್ ಮಿಲೇನಿಯಂ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬುದಾಗಿ ತಿಳಿಸಿದೆ" ಎಂದು ಹೇಳಿದ್ದಾರೆ.
ಇನ್ನು ಸಚಿವರ ಟ್ವಿಟರ್ ಖಾತೆ ಸಾರ್ವಜನಿಕ ವೀಕ್ಷಣೆಗೆ ಗೋಚರಿಸುತ್ತಿದ್ದರೂ, ಈ ಖಾತೆಯನ್ನ ಪ್ರವೇಶಿಸಲು ಅಥವಾ ಯಾವುದೇ ಪೋಸ್ಟ್ ಮಾಡಲು ಅಧಿಕಾರ ಹೊಂದಿರುವ ಯಾರಿಗೂ ಟ್ವಿಟರ್ ಅನುಮತಿ ನೀಡಿಲ್ಲ ಎಂದು ತಿಳಿಸಿದ್ದಾರೆ.