ಬೆಂಗಳೂರು, ಜೂ 25 (DaijiworldNews/PY): "ಕೊರೊನಾದ ಮೊದಲ ಅಲೆಗೆ ತಟ್ಟೆ, ಗಂಟೆ, ಜಾಗಟೆ, ಚಪ್ಪಾಳೆ! ಎರಡನೇ ಅಲೆಗೆ - ಟಿಕಾ ಉತ್ಸವ, ಕುಂಭಮೇಳ, ವರ್ಚಸ್ಸು ವೃದ್ಧಿಗೆ ಕಸರತ್ತು! ಮೂರನೇ ಅಲೆಗೆ - ಸಿದ್ಧತೆಯ ಯೋಜನೆ ಇಲ್ಲದೆ ಇಮೇಜ್ ಬಿಲ್ಡಿಂಗ್ ಚಿಂತನೆಯಲ್ಲಿದ್ದೀರಾ ಪ್ರಧಾನಿ ಮೋದಿ ಅವರೇ" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಒಂದನೇ ಅಲೆಗೆ - ತಟ್ಟೆ, ಗಂಟೆ, ಜಾಗಟೆ, ಚಪ್ಪಾಳೆ! ಎರಡನೇ ಅಲೆಗೆ - ಟಿಕಾ ಉತ್ಸವ, ಕುಂಭಮೇಳ, ವರ್ಚಸ್ಸು ವೃದ್ಧಿಗೆ ಕಸರತ್ತು! ಮೂರನೇ ಅಲೆಗೆ - ಸಿದ್ಧತೆಯ ಯೋಜನೆ ಇಲ್ಲದೆ ಇಮೇಜ್ ಬಿಲ್ಡಿಂಗ್ ಚಿಂತನೆಯಲ್ಲಿದ್ದೀರಾ ಪ್ರಧಾನಿ ನರೇಂದ್ರ ಮೋದಿ ಅವರೇ?" ಎಂದು ಕೇಳಿದೆ.
"ಕರೋನಾ 1ನೇ ಅಲೆ - ಬೆಡ್ ಬಾಡಿಗೆ ಹಗರಣ, ವೈದ್ಯಕೀಯ ಉಪಕರಣ ಖರೀದಿ ಹಗರಣ. ಕರೋನಾ 2ನೇ ಅಲೆ - ಬೆಡ್ ಬ್ಲಾಕಿಂಗ್ ಹಗರಣ, ವ್ಯಾಕ್ಸಿನ್ ಬ್ಲಾಕಿಂಗ್ ಹಗರಣ. ಕರೋನಾ 3ನೇ ಅಲೆ - ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಇನ್ಯಾವ ಹಗರಣ ನಡೆಸಲು ಕಾಯುತ್ತಿರುವಿರಿ ಬಿಜೆಪಿ?" ಎಂದು ಪ್ರಶ್ನಿಸಿದೆ.