ನವದೆಹಲಿ, ಜೂ 25 (DaijiworldNews/PY): "ರೂಪಾಂತರ ಕೊರೊನಾ ಸೋಂಕು ಪರೀಕ್ಷಿಸಲು ಹಾಗೂ ಅದರ ನಿಯಂತ್ರಣಕ್ಕೆ ದೊಡ್ಡ ಪ್ರಮಾಣದ ಪರೀಕ್ಷೆ ಏಕೆ ಮಾಡಲಿಲ್ಲ?" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಡೆಲ್ಟಾ ಪ್ಲಸ್ ರೂಪಾಂತರ ಕುರಿತು ಮೋದಿ ಸರ್ಕಾರಕ್ಕೆ ಪ್ರಶ್ನೆಗಳು, ಡೆಲ್ಟಾ ಪ್ಲಸ್ ರೂಪಾಂತರ ಸೋಂಕು ಪರೀಕ್ಷಿಸಲು ಹಾಗೂ ಅದರ ನಿಯಂತ್ರಣಕ್ಕೆ ದೊಡ್ಡ ಪ್ರಮಾಣದ ಪರೀಕ್ಷೆ ಏಕೆ ಮಾಡಲಿಲ್ಲ?" ಎಂದು ಕೇಳಿದ್ದಾರೆ.
"ದೇಶದ ಭವಿಷ್ಯದೊಂದಿಗೆ ಪ್ರಧಾನಿ ಆಟವಾಡುತ್ತಿದ್ದಾರೆ. ರೂಪಾಂತರ ಸೋಂಕಿಗೆ ಲಸಿಕೆಗಳು ಎಷ್ಟು ಪರಿಣಾಮಕಾರಿ ಮತ್ತು ಪೂರ್ಣ ಮಾಹಿತಿ ಯಾವಾಗ ಲಭ್ಯವಾಗುತ್ತದೆ?" ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
"ಕೊರೊನಾದ ಮೂರನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಯಾವ ರೀತಿಯಾದ ಯೋಜನೆ ಕೈಗೊಳ್ಳಲಿದೆ?" ಎಂದು ಕೇಳಿದ್ದಾರೆ.