ಬೆಂಗಳೂರು, ಜೂ.25 (DaijiworldNews/HR): ಕರ್ನಾಟಕದಾದ್ಯಂತ ಜುಲೈ 1 ರಿಂದ 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದ್ದು, 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಸಂವೇದಾ ವೀಡಿಯೋ ಪಾಠ ಪ್ರತಿದಿನ ಪ್ರಸಾರವಾಗಲಿದೆ.
ಸಾಂಧರ್ಭಿಕ ಚಿತ್ರ
ಜುಲೈ 1 ರಿಂದ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 4 ಗಂಟೆಯವರೆಗೆ ವೀಡಿಯೋ ಪಾಠಗಳು ನಡೆಯಲಿದ್ದು, ತರಗತಿವಾರು ವೇಳಾಪಟ್ಟಿ ಶಾಲಾ ಮುಖ್ಯಸ್ಥರಿಗೆ ಕಳುಹಿಸಲಾಗಿದ್ದು, ಜು. 1 ರಿಂದ 30 ದಿನಗಳ ಸೇತುಬಂಧ ಕಾರ್ಯಕ್ರಮ ನಡೆಸಲಾಗುತ್ತದೆ.
ಸಂವೇದಾ ವೀಡಿಯೋ ಪಾಠ ಪ್ರಸಾರವಾಗುವ ಪಟ್ಟಿ:
1,2, 3 ನೇ ತರಗತಿ ಮಕ್ಕಳಿಗೆ ಭಾನುವಾರ 1.30 ರಿಂದ 2 ರ ತನಕ ನಲಿಕಲಿ ತರಗತಿ ನಡೆಯಲಿದ್ದು, 4 ನೇ ತರಗತಿ ಮಕ್ಕಳಿಗೆ ಶನಿವಾರ 10 ರಿಂದ 10.30 ರವರೆಗೆ ಹಾಗೂ 10,30 ರಿಂದ 11 ರ ತನಕ, ಭಾನುವಾರ 10 ರಿಂದ 10.30, 10.30 ರಿಂದ 11 ರ ತನಕ ಕನ್ನಡ, ಪರಿಸರ ಅಧ್ಯಯನ, ಗಣಿತ ತರಗತಿಗಳು ನಡೆಯಲಿವೆ.
ಇನ್ನು 5 ನೇ ತರಗತಿ ಮಕ್ಕಳಿಗೆ ಶನಿವಾರ 9 ರಿಂದ 9.30 ರವರೆಗೆ, 9.30 ರಿಂದ 10, ಭಾನುವಾರ 9 ರಿಂದ 9.30 ರಿಂದ 10 ರತನಕ ಕನ್ನಡ, ಗಣಿತ, ಪರಿಸರ ಅಧ್ಯಯನ ತರಗತಿಗಳು ನಡೆಯಲಿವೆ. 6 ನೇ ತರಗತಿ ಮಕ್ಕಳಿಗೆ ಗುರುವಾರ 10.30 ರಿಂದ 11, 11.30 ರಿಂದ 12, 1.30 ರಿಂದ 2 ರ ತನಕ ಇಂಗ್ಲಿಷ್, ಗಣಿತ, ಹಿಂದಿ, ವಿಜ್ಞಾನ, ಸಮಾಜ ವಿಷಯಗಳ ಕುರಿತು ತರಗತಿ ನಡೆಯಲಿವೆ.
7 ನೇ ತರಗತಿ ವಿದ್ಯಾರ್ಥಿಗಳಿಗೆ ಗುರುವಾರ 9 ರಿಂದ 9.30, 9.30ರಿಂದ 10.00, 10ರಿಂದ 10.30 ರ ತನಕ ಹಾಗೂ ಶುಕ್ರವಾರ 9ರಿಂದ 9.30, 9.30ರಿಂದ 10, 10ರಿಂದ 10.30ರ ತನಕ ಇಂಗ್ಲಿಷ್, ಗಣಿತ, ಕನ್ನಡ, ವಿಜ್ಞಾನ, ಸಮಾಜ, ಹಿಂದಿ ವಿಷಯಗಳ ತರಗತಿಗಳು ನಡೆಯಲಿವೆ ಎಂದು ವರದಿಯಾಗಿದೆ.