ರಾಯಚೂರು, ಜೂ 24(DaijiworldNews/PY): "ಸೋತು ವಿರೋಧ ಪಕ್ಷದದಲ್ಲಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ಜಗಳ ಆರಂಭವಾಗಿದೆ. ಕಾಂಗ್ರೆಸ್ನಲ್ಲಿ ಖುರ್ಚಿ ಹೋರಾಟ ಶುರುವಾಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸೋತು ವಿರೋಧ ಪಕ್ಷದಲ್ಲಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಜಗಳ ಆರಂಭವಾಗಿದೆ. ಅಖಂಡ ಶ್ರೀನಿವಾ ಮೂರ್ತಿ ಅವರ ಮನೆಗೆ ಬೆಂಕಿ ಹಾಕಿ ಜೈಲಿನಲ್ಲಿದವನನ್ನೇ ಸಸ್ಪೆಂಟ್ ಮಾಡಲಾಗಲಿಲ್ಲ. ಕಾಂಗ್ರೆಸ್ನಲ್ಲಿ ನಾಯಕತ್ವದ ಪ್ರಶ್ನೆಗಳಿವೆ. ಅಲ್ಲದೇ, ಗುಂಪುಗಾರಿಕೆಯೂ ಇದೆ. ಮುಂದೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆದರೆ, ಕಾಂಗ್ರೆಸ್ನಲ್ಲಿ ಈಗಲೇ ಜಗಳ ಆರಂಭವಾಗಿದೆ" ಎಂದಿದ್ದಾರೆ.
"ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಹಾಗಾಗಿ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಎಲ್ಲರೊಂದಿಗೆ ನಾನು ಮಾತನಾಡುತ್ತೇನೆ. ಇತ್ತೀಚೆಗೆ ನಮ್ಮ ಪಕ್ಷಕ್ಕೆ ಸೇರಿದ ಹೆಚ್.ವಿಶ್ವನಾಥ್ ಅವರನ್ನು ಕರೆದು ಪಕ್ಷ ಸಿದ್ದಾಂತಗಳ ವಿಚಾರದ ಬಗ್ಗೆ ತಿಳಿಸಬೇಕು" ಎಂದು ಹೇಳಿದ್ದಾರೆ.
ಶಾಸಕ ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ "ಅವರು, ಬೆಲ್ಲದ್ ಅವರ ಫೋನ್ ಕದ್ದಾಲಿಕೆ ವಿಚಾರವು ತನಿಖಾ ಹಂತದಲ್ಲಿದ್ದು, ಅದನ್ನು ಸರ್ಕಾರ ನೋಡಿಕೊಳ್ಳುತ್ತದೆ" ಎಂದು ತಿಳಿಸಿದ್ದಾರೆ.