ನವದೆಹಲಿ, ಜೂ.24 (DaijiworldNews/HR): ಕೊರೊನಾ ಪ್ರಕರಣಗಳು ಹೆಚ್ಚಿತ್ತಿರುವ ಹಿನ್ನಲೆಯಲ್ಲಿ ಭಾರತ ಮತ್ತು ಯುಎಇ ನಡುವಣ ವಿಮಾನಯಾನದ ಮೇಲೆ ಹೇರಲಾಗಿದ್ದ ತಾತ್ಕಾಲಿಕ ನಿಷೇಧವನ್ನು ತೆರವುಗೊಳಿಸಿದ್ದು, ಗುರುವಾರದಿಂದ ಕಾರ್ಯಾಚರಣೆ ಪುನಾರಂಭಿಸಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಏರ್ ಇಂಡಿಯಾ, "ಎಲ್ಲಾ ಏರ್ ಇಂಡಿಯಾ ವಿಮಾನಗಳು ಜೂನ್ 24ರಿಂದ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -1ರಿಂದ ಕಾರ್ಯನಿರ್ವಹಿಸಲಿದ್ದು, ದುಬೈನಿಂದ ನಿರ್ಗಮಿಸಲಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳು ದುಬೈ ಟರ್ಮಿನಲ್ -2ರಿಂದ ಕಾರ್ಯನಿರ್ವಹಿಸಲಿವೆ" ಎಂದಿದೆ.
ಇನ್ನು ದೇಶದಲ್ಲಿ ಕೊರೊನಾ ಸೋಂಕು ಉಲ್ಬಣವಾದ ಹಿನ್ನಲೆಯಲ್ಲಿ ಏ.24ರಿಂದ ವಿಮಾನ ಸಂಚಾರ ನಿಷೇಧಿಸಿ ಸೌದಿಯ ನಾಗರಿಕ ವಿಮಾನಯಾನ ಪ್ರಾಧಿಕಾರವು ಆದೇಶ ಹೊರಡಿಸಿತ್ತು.