ನವದೆಹಲಿ, ಜೂ.24 (DaijiworldNews/HR): ಕೊರೊನಾದ ಮೂರನೇ ಅಲೆ ಬರಲಿರುವ ಹಿನ್ನೆಲೆಯಲ್ಲಿ ಭಾರತ್ ಬಯೋಟೆಕ್ ಮತ್ತು ಇತರ ಕಂಪನಿಗಳು ಅತ್ಯಂತ ವೇಗವಾಗಿ ಕೊರೊನಾ ಲಸಿಕೆಯ ಪ್ರಯೋಗಗಳನ್ನು ಮಾಡುತ್ತಿದ್ದು, ಇದೇ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ದೇಶದಲ್ಲಿ ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಸಿಗುವ ಸಾಧ್ಯತೆಯಿದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಾಹಿತಿ ನೀಡಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾತನಾಡಿದ ಅವರು, "ಕೋವಿಡ್ ಲಸಿಕೆಗಳನ್ನು ಮಕ್ಕಳಿಗಾಗಿ ಸಾಮಾನ್ಯವಾಗಿ ಸೌಮ್ಯವಾದ ಅಭಿವೃದ್ಧಿಪಡಿಸುವ ಅವಶ್ಯಕತೆಯಿದ್ದು, ಎರಡು ಅಥವಾ ಮೂರು ಹಂತದ ಪ್ರಯೋಗದ ನಂತರ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ" ಎಂದಿದ್ದಾರೆ.
ಇನ್ನು "ಮಕ್ಕಳಿಗೆ ಲಸಿಕೆ ತಯಾರಿಯಲ್ಲಿ ನಾವು ಯಶಸ್ವಿಯಾಗಲಿದ್ದಿ, ಭಾರತದಲ್ಲಿಯೇ ಸ್ವತಃ ಉತ್ಪಾದಿಸಿದ ಲಸಿಕೆಗಳನ್ನು ನೀಡಲಿದೆ" ಎಂದು ತಿಳಿಸಿದ್ದಾರೆ.