ನವದೆಹಲಿ, ಜೂ. 23 (DaijiworldNews/SM): ಅಲೋಪತಿ ವೈದ್ಯಕೀಯ ಪದ್ಧತಿಯನ್ನು ಟೀಕಿಸಿದ್ದ ಯೋಗ ಗುರು ಬಾಬಾ ರಾಮ ದೇವ್ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಹಿನ್ನೆಲೆ ಪ್ರಕರಣದ ವಿಚಾರಣೆ ನಡೆಸದಂತೆ ರಾಮ್ ದೇವ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಕೋವಿಡ್ -19 ಚಿಕಿತ್ಸೆಯಲ್ಲಿ ಅಲೋಪತಿಯ ಪರಿಣಾಮಕಾರಿತ್ವದ ಬಗ್ಗೆ ಮಾಡಿದ ಆರೋಪದ ಮೇಲೆ ಈಗಾಗಲೇ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ವಿಚಾರಣೆಗೆ ತಡೆ ನೀಡಬೇಕೆಂದು ಸುಪ್ರೀಂಕೋರ್ಟ್ ಗೆ ಯೋಗ ಗುರುಗಳು ಮನವಿ ಮಾಡಿದ್ದಾರೆ.
ಅಲ್ಲದೆ, ಭಾರತೀಯ ವೈದ್ಯಕೀಯ ಸಂಘ(ಐಎಂಎ) ಪಾಟ್ನಾ ಮತ್ತು ರಾಯ್ಪುರ ಶಾಖೆಗಳು ದಾಖಲಿಸಿದ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಯಿಸಲು ರಾಮ್ದೇವ್ ಮನವಿ ಮಾಡಿದ್ದಾರೆ. ಅಲ್ಲದೆ ಎಫ್ಐಆರ್ಗಳ ಒಗ್ಗೂಡಿಸುವಿಕೆ ಬಲವರ್ಧನೆ ಮತ್ತು ವಿಚಾರಣೆಯ ನಿಲುಗಡೆಗೆ ಅವರು ಕೋರಿದ್ದಾರೆ.