ಜೋದ್ ಪುರ, ಜೂ 23 (DaijiworldNews/MS): ಏಳನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೋದ್ ಪುರದಲ್ಲಿ ಬಿಎಸ್ಎಫ್ ಸಹಾಯಕ ತರಬೇತಿ ಕೇಂದ್ರದ ಬಿಎಸ್ಎಫ್ ಸಹಾಯಕ ತರಬೇತಿ ಕೇಂದ್ರದ ಸೈನಿಕರು ಒಂಟೆಗಳ ಮೇಲೆ ಮಾಡಿದ ಯೋಗ ಪ್ರದರ್ಶನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಟ್ವಿಟರ್ ಬಳಕೆದಾರರೊಬ್ಬರು ಇದನ್ನು "ನಿರ್ದಯ ಯೋಗ! ಒಂಟೆಯ ಹಿಂಭಾಗದಲ್ಲಿ ಕಾಲುಗಳನ್ನು ಕಟ್ಟಿ ಮತ್ತು ಕಾರ್ಪೆಟ್ ನಂತೆ ನೆಲದ ಮೇಲೆ ಹಾಕುವ ಮೂಲಕ ಯೋಗ ಮಾಡುವುದು ಯೋಗವಲ್ಲ , ಇದು ಕ್ರೌರ್ಯ. " ಎಂದು ಬರೆದುಕೊಂಡಿದ್ದಾರೆ.
ಯೋಗ ದಿನದ ಅಂಗವಾಗಿ ಜವಾನರು ಒಂಟೆಗಳ ಮೇಲೆ ಹಲವಾರು ಯೋಗ ವ್ಯಾಯಾಮಗಳನ್ನು ಮಾಡಿ ಶಕ್ತಿ ಮತ್ತು ಏಕಾಗ್ರತೆ ಪ್ರದರ್ಶಿಸಿದ್ದರು. ಒಂಟೆಗಳು ಸಹ ತಮ್ಮ ಬೋಧಕರೊಂದಿಗೆ ಯೋಗ ವ್ಯಾಯಾಮವನ್ನು ಪ್ರದರ್ಶಿಸಿದ್ದವು.
ಆದಾಗ್ಯೂ, ಈ ಫೋಟೋ ಟ್ವಿಟರ್ ನಲ್ಲಿ ವೈರಲ್ ಆಗಿದ್ದು ನೆಟ್ಟಿಗರು ನೆಗೆಟಿವ್ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಂದಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನ ಹಲವರು ಟೀಕಿಸಿದ್ದಾರೆ. ನಿಮಗೆ ಯೋಗ ಮಾಡಲು ಬೇರೆ ಯಾವ ಸ್ಥಳವು ಸಿಗಲಿಲ್ಲವೆ ಎಂದು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.
ಯೋಗ ಒಳ್ಳೆಯದು, ಪ್ರತಿದಿನವೂ ಮಾಡಬೇಕು. ಆದರೆ ಚಿತ್ರದಲ್ಲಿ ಬಿಎಸ್ಎಫ್_ಇಂಡಿಯಾ ಸಿಬ್ಬಂದಿಯ ಮಾಡಿದಂತೆ ಮಾಡಲಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.