ಮುಂಬೈ, ಜೂ 23 (DaijiworldNews/MS): ಮಗ ವಿಪರೀತ ಗಲಾಟೆ ಮಾಡುತ್ತೇನೆ ಎಂದು ನೆರೆಹೊರೆಯವರು ಪದೇಪದೆ ದೂರು ನೀಡಿ ಕಿರುಕುಳ ನೀಡಿದ್ದರಿಂದ ಮನನೊಂದು ತಾಯಿಯೊಬ್ಬಳು ಮಗುವಿನ ಜೊತೆ 12ನೇ ಮಹಡಿಯ ಮೇಲಿಂದ ಹಾರಿ ಮೃತಪಟ್ಟ ಭೀಕರ ಘಟನೆ ಸೋಮವಾರ ಮುಂಬೈನಲ್ಲಿ ನಡೆದಿದೆ.
44 ವರ್ಷ ರೇಷ್ಮಾ ಟ್ರೆಂಚಿಲ್ ತನ್ನ 7 ವರ್ಷದ ಮಗನ ಜೊತೆ ಮಹಡಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಮಗ ಅತೀ ಗಲಾಟೆ ಮಾಡುತ್ತಿರುವುದಾಗಿ ನೆರೆಹೊರೆಯವರು ಕಿರುಕುಳ ನೀಡಿದ್ದರಿಂದ ಮನನೊಂದು ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರೇಷ್ಮಾ ಟ್ರೆಂಚಿಲ್ ಡೆತ್ ನೋಟ್ ಬರೆದಿಟ್ಟಿದ್ದರು.
ರೇಷ್ಮಾ ಟ್ರೆಂಚಿಲ್ ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಪತಿಯನ್ನು ಕೊವಿಡ್ ಕಾರಣದಿಂದ ಕಳೆದುಕೊಂಡಿದ್ದರು. ಇದಾದ ಬಳಿಕ ಆಕೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದರೊಂದಿಗೆ ಫ್ಲ್ಯಾಟ್ ನ ಕೆಳಅಂತಸ್ತಿನಲ್ಲಿ ವಾಸ್ತವ್ಯ ಹೂಡಿದ್ದ ಮನೆಯವರು ತೊಂದರೆ ಆಗುತ್ತಿದೆ ಎಂದು ಪದೇಪದೆ ದೂರು ನೀಡಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ.
ಮಹಿಳೆ ಬರೆದ ಡೆತ್ ನೋಟ್ ಆಧಾರಿಸಿ 33 ವರ್ಷದ ವ್ಯಕ್ತಿ ಹಾಗೂ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.