ನವದೆಹಲಿ, ಜೂ 23 (DaijiworldNews/PY): "ಹಿಮಾಲಯ ಪರ್ವತ ಭೂ ಪ್ರದೇಶದಲ್ಲಿ ಚೀನಾ ಸೇನೆಯು ಹೋರಾಡುವಷ್ಟು ನೈಪುಣ್ಯತೆ ಹೊಂದಿಲ್ಲ. ಗಾಲ್ವಾನ್ ಘಟನೆಯ ಬಳಿಕ ಚೀನಾಗೆ ಉನ್ನತ ತರಬೇತಿಯ ಅಗತ್ಯವಿದೆ ಎಂಬುದು ಅರ್ಥವಾಗಿದೆ" ಎಂದು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
"ಕಳೆದ ವರ್ಷ ಪೂರ್ವ ಲಡಾಖ್ನಲ್ಲಿ ಗಾಲ್ವಾನ್ ಕಣಿವೆ ಪ್ರದೇಶ ಹಾಗೂ ವಾಸ್ತವ ನಿಯಂತ್ರಣ ರೇಖೆ ಸೇರಿದಂತೆ ಇತರ ಸ್ಥಳದಲ್ಲಿ ಭಾರತದ ಜೊತೆ ಮುಖಾಮುಖಿಯಾದ ಬಳಿಕ ಚೀನಾಕ್ಕೆ ಉನ್ನತ ತರಬೇತಿಯ ಅವಶ್ಯಕತೆ ಇದೆ ಎಂದು ಚೀನಾಗೆ ಅರ್ಥವಾಗಿದೆ" ಎಂದು ರಾವತ್ ತಿಳಿಸಿದ್ದಾರೆ.
"ಭಾರತದ ಗಡಿಯಲ್ಲಿ ಚೀನಾ ಸೇನೆ ನಿಯೋಜನೆಯಲ್ಲಿ ಬದಲಾವಣೆ ಮಾಡಿಕೊಂಡಿದೆ. ಗಲ್ವಾನ್ ಘರ್ಷನೆಯ ಬಳಿಕ ಚೀನಾಗೆ ತನ್ನ ಸೇನೆಗೆ ಉನ್ನತ ಮಟ್ಟದ ತರಬೇತಿಯ ಅವಶ್ಯಕತೆ ಇದೆ ಎನ್ನುವುದು ಮನವರಿಕೆಯಾಗಿದೆ" ಎಂದಿದ್ದಾರೆ.
"ಚೀನಾದ ಯೋಧರಿಗೆ ಹಿಮಾಲಯದಂತಹ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ ಅನುಭವವಿಲ್ಲ. ನಮ್ಮ ಯೋಧರಿಗೆ ಈ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಅನುಭವವಿದೆ" ಎಂದು ಹೇಳಿದ್ದಾರೆ.