ನವದೆಹಲಿ, ಜೂ.22 (DaijiworldNews/HR): ಕೊರೊನಾದ ಡೆಲ್ಟಾ ಪ್ಲಸ್ ರೂಪಾಂತರದ 22 ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, "ಭಾರತದಲ್ಲಿ, ಡೆಲ್ಟಾ ಪ್ಲಸ್ ವೇರಿಯಂಟ್ ನ 22 ಪ್ರಕರಣಗಳಲ್ಲಿ 16 ಪ್ರಕರಣಗಳು ರತ್ನಗಿರಿ ಮತ್ತು ಜಲಗಾಂವ್ (ಮಹಾರಾಷ್ಟ್ರ) ಮತ್ತು ಕೇರಳ ಮತ್ತು ಮಧ್ಯಪ್ರದೇಶದಲ್ಲಿ ಕೆಲವು ಪ್ರಕರಣಗಳಲ್ಲಿ ಪತ್ತೆಯಾಗಿವೆ" ಎಂದು ತಿಳಿಸಿದ್ದಾರೆ.
ಇನ್ನು ಡೆಲ್ಟಾ ಪ್ಲಸ್ ರೂಪಾಂತರವು ಯುಎಸ್, ಯುಕೆ, ಪೋರ್ಚುಗಲ್, ಸ್ವಿಟ್ಜರ್ಲ್ಯಾಂಡ್, ಜಪಾನ್, ಪೋಲೆಂಡ್, ನೇಪಾಳ, ಚೀನಾ ಮತ್ತು ರಷ್ಯಾ ಎಂಬ ಒಂಬತ್ತು ದೇಶಗಳಲ್ಲಿದೆ ಎಂದುಮಾಹಿತಿ ನೀಡಿದ್ದಾರೆ.