ನವದೆಹಲಿ, ಜೂ 22 (DaijiworldNews/MS): ಕೋವಿಡ್ -19 ರ ವೇಗವಾಗಿ ಹರಡುವ ಡೆಲ್ಟಾ ರೂಪಾಂತರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸೋಮವಾರ ಮತ್ತೊಂದು ಎಚ್ಚರಿಕೆ ನೀಡಿದೆ.
ಕೊವೀಡ್ ಡೆಲ್ಟಾ ರೂಪಾಂತರಿ ವಿರುದ್ದ ಕೋವಿಡ್ -19 ಲಸಿಕೆಗಳ 'ಪರಿಣಾಮಕಾರಿತ್ವವನ್ನು ಕಡಿಮೆಯಾಗುತ್ತಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗ ತಜ್ಞರು ಸೋಮವಾರ ಹೇಳಿಕೆ ನೀಡಿದ್ದಾರೆ.
ಆದಾಗ್ಯೂ, ತೀವ್ರವಾದ ಗಂಭೀರತೆಗೆ ಒಳಗಾಗುವುದನ್ನು ತಡೆಯಲು ಮತ್ತು ಸಾವಿನ ಹಂತಕ್ಕೆ ಹೋಗುವುದನ್ನು ತಡೆಯುವಷ್ಟು ಲಸಿಕೆಗಳು ಇನ್ನೂ ಪರಿಣಾಮಕಾರಿಯಾಗಿ ಇವೆ ಎಂದು ವಿಶ್ವಸಂಸ್ಥೆಆರೋಗ್ಯ ಸಂಸ್ಥೆಯ ತಜ್ಞರು ಹೇಳಿದ್ದಾರೆ.
ಭವಿಷ್ಯದಲ್ಲಿ "ರೂಪಾಂತರಗಳ ಸಮೂಹ" ಗಳೇ ಸೃಷ್ಟಿಯಾಗಬಹುದು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಹೀಗಾಗಿಕೊರೊನಾ ವೈರಸ್ ವಿರುದ್ಧ ಹೋರಾಡುವ ವಿರುದ್ಧ ಲಸಿಕೆಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ. ಡೆಲ್ಟಾ ತಳಿಯು ಆತಂಕಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೇರಿಕಾ ಘೋಷಣೆ ಮಾಡಿದೆ.