ಜಮ್ಮು,ಜೂ.21 (DaijiworldNews/HR): ಕೊರೊನಾ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಯನ್ನು ಈ ವರ್ಷ ಕೂಡ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಕೂಡ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದ್ದು, ಈ ನಡುವೆ ಜೂನ್ 28ರಿಂದ ಆನ್ಲೈನ್ ದರ್ಶನ ಲಭ್ಯವಾಗಲಿದೆ. ಇನ್ನು ಚಾಡಿ ಮುಬಾರಕ್ ಅವರನ್ನ ಆಗಸ್ಟ್ 22ರಂದು ಗುಹೆಗೆ ಕರೆದೊಯ್ಯಲಾಗುವುದು ಎಂದು ಅಧಿಕೃತ ಮಾಹಿತಿ ಬಿಡುಗಡೆಯಾಗಬೇಕಿದೆ.
ಇನ್ನು ಈ ಹಿಂದೆ ಭಾರತೀಯ ಸೇನೆ ಅಮರನಾಥ ಯಾತ್ರೆಗೆ ಸಿದ್ಧಎಂದು ಹೇಳಿತ್ತು ಮತ್ತು ಗುಹಾ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆ ನಡೆಸುವ ನಿರ್ಧಾರವು ನಾಗರಿಕ ಆಡಳಿತದ ಮೇಲಿದೆಯಾದರೂ ಅದಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದಿತ್ತು.