ತಿರುವನಂತಪುರ, ಜೂ.21 (DaijiworldNews/HR): ಯೋಗ ಯಾವುದೇ ಧರ್ಮದ ಚೌಕಟ್ಟಿಗೆ ಸೀಮಿತವಾಗಿ ಇರಬಾರದು, ಹಾಗೆ ಆದರೆ ಅನೇಕರು ಯೋಗದ ಪ್ರಯೋಜನಗಳಿಂದ ವಂಚಿತರಾಗಬಹುದು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ಕುರಿತು ವಿಡಿಯೊ ಸಂದೇಶವೊಂದರಲ್ಲಿ ಮಾತನಾದಿರುವ ಅವರು, 'ಆಧುನಿಕ ಯೋಗವನ್ನು ನಾವು ಯಾವುದೇ ಧರ್ಮ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದ ವಿಷಯದಂತೆ ನೋಡಬಾರದು, ಯೋಗವು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಉತ್ತಮವಾಗಿದ್ದು, ಜನರು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು" ಎಂದರು.
ಇನ್ನು ಯೋಗ ವಿಜ್ಞಾನವನ್ನು ಜಾತ್ಯತೀತ ಸ್ವರೂಪದಲ್ಲಿ ಪ್ರಚಾರ ಮಾಡುತ್ತಿರುವ ಕೇರಳ ಯೋಗ ಸಂಘದ ಪ್ರಯತ್ನಕ್ಕೆ ಪಿಣರಾಯಿ ವಿಜಯನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.