ನವದೆಹಲಿ, ಜೂ 21 (DaijiworldNews/PY): ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ದೇಶಾದ್ಯಂತ ನಡೆಸುತ್ತಿದ್ದ ಧಾರ್ಮಿಕ ಮತಾಂತರ ಜಾಲವನ್ನು ಬೇಧಿಸಿದ್ದು, ಸೋಮವಾರ ಇಬ್ಬರನ್ನು ಬಂಧಿಸಿದೆ.
ಸಾಂದರ್ಭಿಕ ಚಿತ್ರ
ಬಂಧಿತ ಆರೋಪಿಗಳನ್ನು ದಕ್ಷಿಣ ದೆಹಲಿಯ ಜಾಮೀಯಾ ನಗರ ನಿವಾಸಿಗಳಾದ ಮುಫ್ತಿ ಖಾಜಿ ಜಹಾಂಗೀರ್ ಖಾಸ್ಮಿ ಹಾಗೂ ಮೊಹಮ್ಮದ್ ಉಮರ್ ಗೌತಮ್ ಎಂದು ಗುರುತಿಸಲಾಗಿದೆ.
"ದೇಶದ ವಿವಿಧ ಕಡೆ ಕಿವುಡ ಮಕ್ಕಳು ಹಾಗೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಗೊಳಸುವ ಜಾಲ ಇದಾಗಿದ್ದು, ಇಲ್ಲಿಯವರೆಗೆ ಸುಮಾರು 1 ಸಾವಿರಕ್ಕೂ ಅಧಿಕ ಮಂದಿಯನ್ನು ಮತಾಂತರ ಮಾಡಲಾಗಿದೆ" ಎಂದು ಉತ್ತರಪ್ರದೇಶದ ಪೊಲೀಸರು ಹೇಳಿದ್ದಾರೆ.
"ನೋಯ್ಡಾದ ಮೂಕ ಹಾಗೂ ಕಿವುಡ ಶಾಲೆಯ 12ಕ್ಕೂ ಹೆಚ್ಚಿನ ಮಕ್ಕಳನ್ನು ಮತಾಂತರ ಮಾಡಲಾಗಿದೆ" ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ಬಗ್ಗೆ ಉತ್ತರಪ್ರದೇಶದ ಹೊಸ ಮತಾಂತ್ರ ನಿಗ್ರಹ ಕಾಯ್ದೆಯಡಿ ಗೋಮ್ಟಿನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಸ್ಲಾಮಿಕ್ ದಾವಾ ಕೇಂದ್ರದ ಅಧ್ಯಕ್ಷರ ಹೆಸರು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ ಎಂದು ವರದಿ ವಿವರಿಸಿದೆ.