ನವದೆಹಲಿ, ಜೂ.21 (DaijiworldNews/HR): ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 2.98 ಕೋಟಿ ಕೊರೊನಾ ಲಸಿಕೆ ಡೋಸ್ ಲಭ್ಯವಿದ್ದು, ಈವರೆಗೆ ರಾಜ್ಯಗಳಿಗೆ 29.35 ಕೋಟಿ (29,35,04,820) ಪ್ರಮಾಣವನ್ನು ಲಸಿಕೆಯನ್ನು ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಸಾಂಧರ್ಭಿಕ ಚಿತ್ರ
ಮುಂಬರುವ ಮೂರು ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2,310ಕ್ಕೂ ಹೆಚ್ಚಿನ ಲಸಿಕೆ ಪೂರೈಕೆಯಾಗಲಿದ್ದು, ಈವರೆಗೆ ಕೇಂದ್ರವು ರಾಜ್ಯಗಳಿಗೆ 29.35 ಕೋಟಿ ಪ್ರಮಾಣವನ್ನು ನೀಡಿದ್ದು, ಇದರಲ್ಲಿ, ವ್ಯರ್ಥವಾಗಿರುವುದು ಸೇರಿದಂತೆ ಒಟ್ಟು ಬಳಕೆ 26,36,26,884 ಡೋಸ್ಗಳಾಗಿವೆ ಎಂದು ಸಚಿವಾಲಯ ತಿಳಿಸಿದೆ.
ಇನ್ನು ದೇಶದಲ್ಲಿ ಈ ವರ್ಷದ ಜನವರಿ 16ರಿಂದ ಒಟ್ಟು 28,00,36,898 ಡೋಸ್ಗಳನ್ನು ನೀಡಲಾಗಿದ್ದು, ಕಳೆದ 24 ಗಂಟೆಗಳಲ್ಲಿ 30,39,996 ಡೋಸ್ಗಳನ್ನು ನೀಡಲಾಗಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.